Bantwal: ಬಿಜೆಪಿ ಅಭ್ಯರ್ಥಿ ಚೌಟ ಬಂಟ್ವಾಳ ಶಾಸಕರ ಭೇಟಿ
Thursday, March 14, 2024
ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ಗಂಜಿಮಠದಲ್ಲಿರುವ ಒಡ್ಡೂರು ಫಾರ್ಮ್ಸ್‌ನ ನಿವಾಸದಲ್ಲಿ ಭೇಟಿಯಾಗಿ ಮಾರ್ಗದರ್ಶನ ಪಡೆದರು.
ಹಾಗೆಯೇ ಶ್ರೀ ಕೊಡಮಣಿತ್ತಾಯ ದೈವದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಬ್ರಜೇಶ್ ಚೌಟ ಅವರನ್ನು ಶಾಸಕರು ಶಾಲು ಹೊದಿಸಿ ಶುಭಹಾರೈಸಿದರು.
ಪಕ್ಷದ ಪ್ರಮುಖರಾದ ಬಿ. ದೇವದಾಸ ಶೆಟ್ಟಿ, ಪುರುಷೊತ್ತಮ ಶೆಟ್ಟಿ ವಾಮದಪದವು, ಸುದರ್ಶನ್ ಬಜ, ಕಾರ್ತಿಕ್ ಬಲ್ಲಾಳ್, ನಂದರಾಮ ರೈ, ಪವನ್ ಕುಮಾರ್ ಮೊದಲಾದವರಿದ್ದರು.