Mangalore: ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬ್ರಿಜೇಶ್ ಚೌಟ
Thursday, March 14, 2024
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದ ಬೆನ್ನಲ್ಲೇ ಬ್ರಿಜೇಶ್ ಚೌಟ ಅವರು ಸಂಘ ಪರಿವಾರದ ಮುಖಂಡರನ್ನು, ರಾಜಕೀಯ ನೇತಾರರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಅದರಲ್ಲೂ ಮುಖ್ಯವಾಗಿ ಸಂಘಪರಿವಾರದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಗುರುವಾರ ಬೆಳಿಗ್ಗೆ ಅವರ ಮನೆಯಲ್ಲೇ ಭೇಟಿಯಾಗಿ ಮಾತುಕತೆ ನಡೆಸಿ ಕಲ್ಲಡ್ಕ ಭಟ್ಟರ ಆಶೀರ್ವಾದ ಪಡೆದರು. ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬ್ರಿಜೇಶ್ ಚೌಟ ಅತ್ಯಧಿಕ ಮತಗಳಿಂದ ಗೆದ್ದು ಬರಲಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರೂ ಅಹರ್ನಿಶಿಯಾಗಿ ದುಡಿದು ಬ್ರಜೇಶ್ ಅವರ ಗೆಲುವಿಗೆ ಸಹಕಾರಿಯಾಗ ಬೇಕೆಂದು ಪ್ರಭಾಕರ ಭಟ್ ತಿಳಿಸಿದರು.
ಬ್ರಿಜೇಶ್ ಚೌಟ ಅವರು ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್, ಯೊಗೀಶ್ ಭಟ್, ವಿನಯ ಹೆಗ್ಡೆ ಸಹಿತ ಅನೇಕ ಬಿಜೆಪಿ ಮುಖಂಡರ ಮನೆಗೆ ತೆರಳಿ ಆಶೀರ್ವಾದ ಪಡೆದರು.