Mangalore: ಸಾಗರ್ ಅತ್ತಾವರ ಅವರಿಗೆ ಚಿನ್ನದ ಪದಕ

Mangalore: ಸಾಗರ್ ಅತ್ತಾವರ ಅವರಿಗೆ ಚಿನ್ನದ ಪದಕ


ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಸಹಾಯಕ ಪ್ರಾಧ್ಯಾಪಕ ಸಾಗರ್ ಅತ್ತಾವರ ಅವರು ಮಾರ್ಚ್ 9 ಮತ್ತು 10 ರಂದು ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ವಲಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2024 ರಲ್ಲಿ 100 ಮತ್ತು 200 ಮೀಟರ್‌ಗಳಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ಇದಕ್ಕು ಮೊದಲು ಅವರು ಜನವರಿ 14 ರಂದು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2024 ರಲ್ಲಿ 100 ಮತ್ತು 200 ಮೀಟರ್‌ಗಳಲ್ಲಿ ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದರು.

ಸಾಗರ್ ಅತ್ತಾವರ್ ಅವರು ರಾಧಾಕೃಷ್ಣ ಹಾಲ್, ಉರ್ವಾದಲ್ಲಿರುವ ವಾರಿಯರ್ಸ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಮಾಲೀಕ ಮತ್ತು ಸಂಸ್ಥಾಪಕರಾಗಿದ್ದು, ಇವರು ಸಹಾಯಕ ಪ್ರಾಧ್ಯಾಪಕರಲ್ಲದೆ ಉತ್ಸಾಹಭರಿತ ಮಾರ್ಷಲ್ ಆರ್ಟಿಸ್ಟ್ ಮತ್ತು ಪಟ್ಟುಬಿಡದ ಕ್ರೀಡಾಪಟು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article