Mangalore: ಮಹಿಳಾ ದಿನಾಚರಣೆ: ಗ್ರಂಥಾವಲೋಕನ ಕಾರ್ಯಕ್ರಮ

Mangalore: ಮಹಿಳಾ ದಿನಾಚರಣೆ: ಗ್ರಂಥಾವಲೋಕನ ಕಾರ್ಯಕ್ರಮ


ಮಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯದಲ್ಲಿ ಗ್ರಂಥಾವಲೋಕನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ವಿದ್ಯಾರ್ಥಿಗಳು ತನ್ನ ಜೀವನ ರೂಪಿಸಿಕೊಳ್ಳಲು ಸೂಕ್ತ ಮಾರ್ಗದರ್ಶಕರಿಂದ ಮಾರ್ಗದರ್ಶನದ ಅಗತ್ಯವಿದೆ. ಮಾರ್ಗದರ್ಶಕರ ಸೂಚನೆಯಂತೆ ಸಾಗಿದರೆ, ಬದುಕಿನಲ್ಲಿ ಒಂದಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಡಾ. ಸುಧಾಮೂರ್ತಿ, ಕವಯತ್ರಿ ಕಮಲಾದೇವಿ ಚಟ್ಟೋಪಾಧ್ಯಾಯ ಸೇರಿದಂತೆ ಸಾಕಷ್ಟು ಮಹಿಳಾ ಸಾಧಕಿಯರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕಿಯರ ಕುರಿತು ಕಾಲೇಜಿನ ವಿದ್ಯಾರ್ಥಿನಿಯರು ಪರಿಚಯ ಮಾಡಿಕೊಟ್ಟರು. 

ಈ ಸಂದರ್ಭದಲ್ಲಿ ಭೌತಶಾಸ್ತ್ರ ವಿಭಾಗದ ಡಾ. ಇಂದಿರಾ, ಮಹಿಳಾ ವೇದಿಕೆ ಅಧ್ಯಕ್ಷೆ ಡಾ. ಶೋಭ ಮತ್ತು ಗ್ರಂಥಾಲಯದ ಮೇಲ್ವಿಚಾರಕಿ ಡಾ. ವನಜಾ ಉಪಸ್ಥಿತರಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article