Mangalore: ಸರ್ಕಿಟ್‌ಹೌಸ್-ಬಿಜೈ ರಸ್ತೆಗೆ ಜಾರ್ಜ್ ಫೆರ್ನಾಂಡಿಸ್ ಹೆಸರು

Mangalore: ಸರ್ಕಿಟ್‌ಹೌಸ್-ಬಿಜೈ ರಸ್ತೆಗೆ ಜಾರ್ಜ್ ಫೆರ್ನಾಂಡಿಸ್ ಹೆಸರು


ಮಂಗಳೂರು: ಸರ್ಕಿಟ್ ಹೌಸ್‌ನಿಂದ ಬಿಜೈ ತನಕದ ರಸ್ತೆಗೆ ಮಾಜಿ ಕೇಂದ್ರ ಸಚಿವ ದಿ. ಜಾರ್ಜ್ ಫೆರ್ನಾಂಡಿಸ್ ಅವರ ಹೆಸರನ್ನು ನಾಮಕರಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ ಎಂದು ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಾರ್ಜ್ ಫೆರ್ನಾಂಡಿಸ್ ಅವರು 1930 ರಲ್ಲಿ ಬಿಜೈನಲ್ಲಿ ಜನಿಸಿದ್ದು, 1961 ರಿಂದ 68ರ ವರೆಗೆ ಮುಂಬೈನ ಮುನ್ಸಿಪಾಲ್‌ನ ಕಾರ್ಪೊರೇಟ್ ಆಗಿ ಸೇವೆ ಸಲ್ಲಿಸಿದ್ದಾರೆ. 1974 ರಲ್ಲಿ ರೈಲ್ವೇ ಕಾರ್ಮಿಕರ ಪರವಾಗಿ ಹೋರಾಟ ಮಾಡಿದ್ದು, ಇದರಿಂಗಾಗಿ 1.4 ಮಿಲಿಯನ್ ಕಾರ್ಮಿಕರಿಗೆ ಉಪಯುಕ್ತವಾಗಿದೆ. 1967 ರಿಂದ 2004 ರವರೆಗೆ 9 ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದು, ಕೈಗಾರಿಕೆ, ರೈಲ್ವೇ, ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ರೈಲ್ವೇ ಸಚಿವರಾಗಿದ್ದ ಸಂದರ್ಭದಲ್ಲಿ ಕೊಂಕಣ ರೈಲ್ವೇಯನ್ನು ಮಂಗಳೂರಿನ ವರೆಗೆ ವಿಸ್ತರಿಸಿದ್ದು, ದೇಶದ ಎರಡನೇ ಅತೀ ದೊಡ್ಡ ರೈಲ್ವೇ ಜಾಲವನ್ನಾಗಿಸಿದ್ದಾರೆ ಎಂದರು.

ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಆಪರೇಷನ್ ವಿಜಯ ಕಾರ್ಯಚರಣೆ ನಡೆಸಿ ದೇಶದ ಸೈನಿಕರನ್ನು ಗೆಲ್ಲುವಂತೆ ಮಾಡಿದರು. ಇವರ ಹೆಸರನ್ನು ಸರ್ಕಿಟ್‌ಹೌಸ್‌ನಿಂದ ಬಿಜೈ ತನಕ 1 ಕಿ.ಮೀ. ರಸ್ತೆಗೆ ಹೆಸರಿಡಲು ಅಂದಿನ ಮೇಯರ್ ಆದಂತಹ ಜಯಾನಂದ ಅಂಚನ್ ಅವರ ಸ್ಥಾಯಿ ಸಮಿತಿಯ ಶಕಿಲಾ ಕಾವಾ ಅವರು ಅಂಗೀಕಾರ ನೀಡಿದ್ದು, ಮುಖ್ಯಮಂತ್ರಿಗಳು ಶೀರ್ಘ್ರವಾಗಿ ಸಮ್ಮತಿಸಿದ್ದು, ನಗರಾಭಿವೃದ್ಧಿ ಸಚಿವರು ಅನುಮೋದನೆಯನ್ನು ನೀಡಿದ್ದಾರೆ. ಚುನಾವಣೆ ಮುಗಿದ ಕೂಡಲೇ ರಸ್ತೆಗೆ ಹೆಸರಿಡುವ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಇದಕ್ಕೆ ಬೆಂಬಲ ನೀಡಿದ ಮುಖ್ಯಮಂತ್ರಿಗಳಿಗೆ, ನಗರಾಭಿವೃದ್ಧಿ ಸಚಿವರಿಗೆ, ಶಾಸಕರಿ, ಆಗಿನ ಮೇಯರ್‌ಗೆ ಮುಖ್ಯ ಸಚೇತಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article