Mangalore: ಶಾಸ್ತಾ ನ್ಯಾಕ್ ವಿ. ಅಮೇರಿಕಾಕ್ಕೆ
Thursday, March 28, 2024
ಮಂಗಳೂರು: ಶಕ್ತಿ ನಗರದ ಶಕ್ತಿ ವಸತಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಶಾಸ್ತಾ ನಾಕ್ ವಿ. ರಿಜನರೋನ್ ಇಂಟರನ್ಯಾಶನಲ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಫೇರ್-೨೦೨೪(ISEF) ಗೆ ಆಯ್ಕೆಯಾಗಿದ್ದಾನೆ. ಈ ಉತ್ಸವವವು ಮೇ ೧೨ರಿಂದ ೧೭ರವರೆಗೆ ಅಮೇರಿಕಾದ ಲಾಸ್‌ಎಂಜಿಲಸ್, ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿದೆ.
ಜ.೨೮ರಿಂದ ೩೧ರವರೆಗೆ ದೆಹಲಿಯಲ್ಲಿ DST ಮತ್ತು ಭಾರತ ಸರಕಾರದ ಸಹಯೋಗದಲ್ಲಿ ನಡೆದರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ "ENERGY: SUSTAINABLEMATERIAL & DESIGN" ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಶಾಲೆಯ ವಿಜ್ಞಾನ ಶಿಕ್ಷಕಿ ಚೈತ್ರಾ ಭಂಡಾರಿ ಮಾರ್ಗದರ್ಶನ ನೀಡಿದ್ದಾರೆ. ಶ್ರೀನಾಥ್ ನ್ಯಾಕ್ ವಿ. ಹಾಗೂ ಚಂದ್ರಿಕಾ ಶ್ರೀನಾಥ್ ದಂಪತಿಗಳ ಪುತ್ರ.