Mangalore: ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

Mangalore: ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ದಕ್ಷಿಣ ವಾರ್ಡಿನ 60 ಲಕ್ಷದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಇಲ್ಲಿನ ವಿಕ್ಟರಿ ಅಪಾರ್ಟ್ಮೆಂಟ್ ಬಳಿಯಿಂದ ಕದ್ರಿ ರುದ್ರ ಭೂಮಿವರೆಗೆ 50 ಲಕ್ಷ ರೂ. ವೆಚ್ಚದಲ್ಲಿ ನೂತನ ಒಳಚರಂಡಿ ಪೈಪ್‌ಲೈನ್ ಹಾಗೂ 10 ಲಕ್ಷ ರೂ. ವೆಚ್ಚದಲ್ಲಿ ಕಮಾಂಡರ್ ಜಾರ್ಜ್ ಮಾರ್ಟಿಸ್ ರಸ್ತೆಯ ಡಾಮರೀಕರಣದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳಲಿ ಎಂದು ಹಾರೈಸಿದರು.

ಮನಪಾ ಸದಸ್ಯರಾದ ಮನೋಹರ್ ಕದ್ರಿ, ಕಾವ್ಯ ನಟರಾಜ್ ಆಳ್ವ, ಶಕೀಲ ಕಾವಾ, ಪ್ರಮುಖರಾದ ಯಶವಂತ್ ನಾಯಕ್, ತಾರನಾಥ ಶೆಟ್ಟಿ, ವಸಂತ್, ಶರಣ್ ಕದ್ರಿ, ಸಹಾನ್, ಹೇಮಾನಂದ್, ಸಚಿನ್ ಕದ್ರಿ, ರಾಘವೇಂದ್ರ ಬರುವತ್ತಾಯ, ಶ್ರವಣ್, ನರೇಶ್ ಶೇಟ್, ನಾಗೇಶ್ ದೇವಾಡಿಗ, ಸುರೇಶ್ ದೇವಾಡಿಗ, ದಿನೇಶ್ ದೇವಾಡಿಗ, ಬಂಟಪ್ಪ ರೈ, ರಾಮಕೃಷ್ಣ ರಾವ್, ಸಂಜೀವ ಅಡ್ಯಾರ್, ವೆಂಕಟೇಶ್, ಚಂದ್ರಕಾಂತ್, ಕೇಶವ ಕದ್ರಿ, ಸುಮತಿ ಹೆಗ್ಡೆ, ರವೀಶ್ ರೈ, ಚಂದ್ರಕಾಂತ್, ಸುನಿಲ್ ಶೆಟ್ಟಿ, ಅರ್ಜುನ್ ಶೇಟ್, ಶ್ರೀಧರ್ ಐತಾಳ್, ಅನಿಲ್ ಶೆಟ್ಟಿ, ಹಾಗೂ ಪಾಲಿಕೆ ಇಂಜಿನಿಯರ್ ಗಳಾದ ಜೆರಿಸನ್ ಜಾರ್ಜ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article