Mangalore: ಸ್ಕೇಟಿಂಗ್ ಪಟು ಡ್ಯಾಶಿಯಲ್ ಕೊನ್ಸೆಸೊಗೆ ಕೆಳದಿಚೆನ್ನಮ್ಮ ಪ್ರಶಸ್ತಿ
Tuesday, March 12, 2024
ಮಂಗಳೂರು: ಸ್ಕೇಟಿಂಗ್‌ನಲ್ಲಿ ಸಾಧನೆ ಮಾಡಿದ ಡ್ಯಾಶಿಯಲ್ ಕೊನ್ಸೆಸೋ ಅವರಿಗೆ ಕ್ರೀಡಾ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ 2023-24ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಹಿಳಾ ದಿಮಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು.
ಡ್ಯಾಶಿಯಲ್ ಕೊನ್ಸೆಸೊ ತನ್ನ ನಾಲ್ಕನೇ ವರ್ಷ ಪ್ರಾಯದಲ್ಲಿ ಸ್ಕೇಟಿಂಗ್ ತರಬೇತಿ ಆರಂಭಿಸಿ ಅಂತರಾಷ್ಟ್ರೀಯ, ರಾಷ್ಟ್ರೀಯ ರಾಜ್ಯ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು ೧೪೭ ಪದಕಗಳನ್ನ ಪಡೆದಿದ್ದಾರೆ. ಪ್ರಸ್ತುತ ಅಶೋಕನಗರದ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಸದಸ್ಯೆಯಾಗಿರುವ ಡ್ಯಾಶಿಯಲ್ ಕೋಚ್ ಮೋಹನ್ ದಾಸ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ನಗರದ ದೇರೆ ಬೈಲ್ ನಿವಾಸಿ ಫ್ರಾನ್ಸಿಸ್ ಹಾಗೂ ಡೊರಿಸ್ ಕೊನ್ಸೆಸೊ ಅವರು ಪುತ್ರಿಯಾಗಿದ್ದಾರೆ.