Subramanya: ಬೆಳ್ಳಂ ಬೆಳಗ್ಗೆ ಕಾಣಿಸಿಕೊಂಡ ಕಾಡಾನೆ
Tuesday, March 12, 2024
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಐನೆಕಿದು ಶಾಲಾ ಬಳಿ ಸೋಮವಾರ ಬೆಳ್ಳಂ ಬೆಳಗ್ಗೆ ಕಾಡಾನೆ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ.
ಕೆಲ ದಿನಗಳ ಹಿಂದೆ ಶಾಲಾ ಬಳಿ ಸಂಜೆ ವೇಳೆ ಕಾಡಾನೆ ರಸ್ತೆ ದಾಟಿ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಸೋಮವಾರ ಬೆಳಗ್ಗೆ ಸುಬ್ರಹ್ಮಣ್ಯ-ಹರಿಹರ ಪಲ್ಲತ್ತಡ್ಕ ರಸ್ತೆಯ ಐನೆಕಿದು ಶಾಲಾ ಬಳಿ ಕಾಡಾನೆ ರಸ್ತೆಗೆ ಬಂದ ಕಾಡಾನೆ ಮತ್ತೆ ಬಂದ ಕಡೆಯ ಅರಣ್ಯ ಪ್ರದೇಶದತ್ತ ತೆರಳಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ರಾತ್ರಿ ಹಾಗೂ ಹಗಲು ವೇಳೆ ಸಂಚರಿಸುವವರು ಜಾಗೃತಿ ವಹಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮೊನ್ನೆ ಕಾಣಿಸಿಕೊಂಡ ಕಾಡಾನೆಯೇ ಸೋಮವಾರವೂ ಕಾಣಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ.