Mangalore: ಮಹಾಮಾಯ ರಥೋತ್ಸವ ಸಂಪನ್ನ
Friday, March 15, 2024
ಮಂಗಳೂರು: ನಗರದ ರಥಬೀದಿಯಲ್ಲಿರುವ ಸುಮಾರು 500 ವರ್ಷ ಪೂರ್ವ ಇತಿಹಾಸ ವಿರುವ ಕುಡ್ತೆರಿ ಶ್ರೀ ಮಹಾಮಾಯ ದೇವಸ್ಥಾನದ ಬ್ರಹ್ಮ ರಥೋತ್ಸವ ಶುಕ್ರವಾರ ಸಹಸ್ರಾರು ಭಜಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು. ಬ್ರಹ್ಮರಥೋತ್ಸವ ಪ್ರಯುಕ್ತ ಬೆಳಿಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ಮಹಾಪ್ರಾರ್ಥನೆ, ಶ್ರೀ ದೇವರಿಗೆ ಪಂಚಾಮೃತ, ಗಂಗಾಭಿಷೇಕ ಬಳಿಕ ಮಹಾಭಿಷೇಕಗಳು ನಡೆದವು, ಯಜ್ಞಮಂಟಪದಲ್ಲಿ ಮಹಾ ಯಜ್ಞಬಳಿಕ ಪೂರ್ಣಾಹುತಿ, ಮಹಾಬಲಿ ರಥಪೂಜೆ ಬಳಿಕ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರಗಿತು.
