Putturu: ಗೂಡ್ಸ್ ಲಾರಿಗೆ ಕಾರು ಡಿಕ್ಕಿ: ಒಂದೇ ಕುಟುಂಬದ ನಾಲ್ವರಿಗೆ ಗಾಯ
Sunday, March 10, 2024
ಪುತ್ತೂರು: ನಿಲ್ಲಿಸಲಾಗಿದ್ದ ಗೂಡ್ಸ್ ಲಾರಿಯೊಂದಕ್ಕೆ ಕಾರೊಂಡು ಡಿಕ್ಕಿಯಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಗಾಯಗೊಂಡ ಘಟನೆ ಪುತ್ತೂರು ನಗರದ ಕೂರ್ನಡ್ಕ ಮರೀಲ್ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಬಳಿಯಲ್ಲಿ ಭಾನುವಾರ ಸಂಜೆ ನಡೆದಿದೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮದ ಸುಳ್ಳಿಮಲೆ ಎಂಬಲ್ಲಿನ ಒಂದೇ ಕುಟುಂಬದ ನಿವಾಸಿಗಳಾದ ಕೃಷ್ಣಪ್ಪ ನಾಯ್ಕ(60), ಅವರ ಪತ್ನಿ ಗುಲಾಬಿ(55), ಪುತ್ರಿ ರೋಹಿಣಿ(32) ಮತ್ತು ಮೊಮ್ಮಗಳು ಗನ್ಯ(2) ಗಾಯಗೊಂಡವರು.
ಪುತ್ತೂರಿನ ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಬಳಿಯಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಮುಂಬಾಗದಿಂದ ಬೈಕೊಂದು ಆಗಮಿಸಿದ್ದು, ಬೈಕ್‌ಗೆ ಸೈಡ್ ಕೊಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಗೂಡ್ಸ್ ಲಾರಿಗೆ ಡಿಕ್ಕಿ ಹೊಡೆದಿತ್ತು. ಗಾಯಾಳುಗಳ ಪೈಕಿ ಕೃಷ್ಣಪ್ಪ ನಾಯ್ಕ ಮತ್ತು ಗುಲಾಬಿ ಗಂಭೀರ ಗಾಯಗೊಂಡಿದ್ದು ಪುತ್ತೂರಿನ ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲಾಗಿದ್ದಾರೆ. ರೋಹಿಣಿ ಮತ್ತು ಗನ್ಯ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಕಾರು ಚಾಲಕ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಪುತ್ತೂರು ಸಂಚಾರಿ ಠಾಣಾ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
