Ullal: ಕೊರಗಜ್ಜನ ಕ್ಷೇತ್ರಕ್ಕೆ ನಟ ದರ್ಶನ್ ಭೇಟಿ

Ullal: ಕೊರಗಜ್ಜನ ಕ್ಷೇತ್ರಕ್ಕೆ ನಟ ದರ್ಶನ್ ಭೇಟಿ


ಉಳ್ಳಾಲ: ಕಾಟೇರ ಸಿನೆಮಾ ಯಶಸ್ಸಿನ ಸಂತಸದಲ್ಲಿರುವ ಅಭಿಮಾನಿಗಳ ದಾಸ, ನಟ ದರ್ಶನ್ ಅವರು ಭಾನುವಾರ ಬೆಳಿಗ್ಗೆ ಮಂಗಳೂರು ಹೊರವಲಯದ ಕುತ್ತಾರಿನ ಕೊರಗಜ್ಜ ದೈವದ ಆದಿಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 


ಈ ಮಾಧ್ಯಮದವರು ದರ್ಶನ್ ಅವರಲ್ಲಿ ಕೊರಗಜ್ಜನಲ್ಲಿ ಪ್ರಾರ್ಥನೆ ಮಾಡಿ ಏನ್ ಬೇಡಿಕೆ ಸಲ್ಲಿಸಿದ್ರಿ ಎಂದು ಪ್ರಶ್ನಿಸಿದ್ದಕ್ಕೆ ಬೇಡಿಕೆ ನಿಮ್ಮಲ್ಲಿ ಹೇಳಿದ್ರೆ ನೀವು ನೆರವೇರಿಸ್ತೀರ ಎಂದು ಉತ್ತರಿಸಿದ್ದಾರೆ.


ಸುಮಲತಾ ಪರ ಪ್ರಚಾರದ ಬಗ್ಗೆ ಕೇಳಿದಕ್ಕೆ ಗರಂ ಆಗಿ ಮುನ್ನಡೆದಿದ್ದು ಹೆತ್ತ ತಾಯಿನ ನೀವಾದರೂ ಬಿಟ್ಟು ಕೊಡ್ತೀರ ಸರ್ ಎಂದು ಮಾಧ್ಯಮದವರನ್ನ ಪ್ರಶ್ನಿಸಿದ್ದಾರೆ. ಮೊನ್ನೆವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ. ಈಗ ಅವರ ಕೈ ಬಿಟ್ರೆ ಆಗುತ್ತಾ, ಅಮ್ಮ ಅಮ್ಮನೆ ಸರ್ ಎಂದಿದ್ದಾರೆ.


ಬಹಳಷ್ಟು ಸ್ನೇಹಿತರು ಕೊರಗಜ್ಜನ ಬಗ್ಗೆ ಹೇಳಿದ್ದರು. ಮಂಗಳೂರಿಗೆ ಅನೇಕ ಬಾರಿ ಬಂದರೂ ಇವತ್ತೇ ಮೊದಲ ಬಾರಿ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದು ತುಂಬ ಖುಷಿ ಆಗಿದೆ ಎಂದರು. ದೈವಾರಾದನೆಯ ಚಿತ್ರ ನಿರ್ಮಾಣದ ಬಗ್ಗೆ ಯೋಜನೆ ಇಲ್ಲ ಎಂದರು.

ಚಿತ್ರ ನಟ ಚಿಕ್ಕಣ್ಣ ದರ್ಶನ್ ಜತೆಗಿದ್ದರು. ಕೊರಗಜ್ಜನ ಕ್ಷೇತ್ರದ ಆಡಳಿತ ಮಂಡಳಿ ಮುಖ್ಯಸ್ಥರು ನಟರನ್ನ ಶಾಲು ಹೊದಿಸಿ ಸನ್ಮಾನಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article