Ullal: ಹಿಂದುತ್ವದ ನೆಲೆಯಲ್ಲೇ ದ.ಕ.ಜಿಲ್ಲೆ ಅಭಿವೃದ್ಧಿ ಪಡಿಸುತ್ತೇನೆ

Ullal: ಹಿಂದುತ್ವದ ನೆಲೆಯಲ್ಲೇ ದ.ಕ.ಜಿಲ್ಲೆ ಅಭಿವೃದ್ಧಿ ಪಡಿಸುತ್ತೇನೆ


ಉಳ್ಳಾಲ: ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಅಗತ್ಯ ಸವಲತ್ತು ನೀಡುವ ಜೊತೆಗೆ ಬದಲಾವಣೆ ಮಾಡಿದ್ದಾರೆ. ದೇಶ ರಕ್ಷಣೆ ಅವರಿಂದ ಮಾತ್ರ ಸಾಧ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಅವರು ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲ ಇದರ ಆಶ್ರಯದಲ್ಲಿ ಅಸೈಗೋಳಿ ಬಂಟರ ಭವನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ನೆಹರು ಆಡಳಿತ ಕಾಲದಲ್ಲಿ ಜನಸಂಖ್ಯೆ ಲೆಕ್ಕಾಚಾರ ನಡೆದಿತ್ತು. ಆದರೆ ಅಭಿವೃದ್ಧಿ ಕಡೆ ಹೆಜ್ಜೆ ಇಟ್ಟಿರಲಿಲ್ಲ.ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಶಿ, ಅಡ್ವಾಣಿ ಅವರು ದೇಶದ ಬದಲಾವಣೆ ಬಯಸಿದ್ದರು. ಆದರೆ ದೇಶ ಅಭಿವೃದ್ಧಿ ಆಗಬೇಕು ಎಂದು ಕನಸು ಕಂಡು ಆ ನೆಲೆಯಲ್ಲಿ ಉತ್ತಮ ಕೆಲಸ ಮಾಡಿದವರು ಅದು ನರೇಂದ್ರ ಮೋದಿ ಮಾತ್ರ. ಕೊರೊನ ಸಮಯದಲ್ಲಿ ಎಲ್ಲರಿಗು ವ್ಯಾಕ್ಸಿನ್ ಔಷಧಿ ತಲುಪಿಸಿದ್ದು ನರೇಂದ್ರ ಮೋದಿ ಸರ್ಕಾರ.ಕೇಂದ್ರ ಸರ್ಕಾರ ಔಷಧಿ ವ್ಯವಸ್ಥೆ ಮಾಡಿದಾಗ ಕಾಂಗ್ರೆಸಿಗರು ಈ ಔಷಧಿ ಪಡಕೊಂಡ ವರಿಗೆ ಮಕ್ಕಳಾಗುವುದಿಲ್ಲ.ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಪಪ್ರಚಾರ ಮಾಡಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.

ನಾವು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್,ಪಟ್ಟಣ ಪಂಚಾಯಿತಿಗಳಲ್ಲಿ ಗೆದ್ದಿದ್ದೇವೆ. ಈಗ ನಮ್ಮುಂದಿರುವುದು ಲೋಕಸಭಾ ಚುನಾವಣೆ. ಈ ಚುನಾವಣೆಯಲ್ಲಿ ನಾವು ಗೆಲ್ಲದಿದ್ದರೆ ನಮ್ಮ ಕನಸು ಕನಸಾಗಿಯೇ ಉಳಿಯಬಹುದು. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಪಕ್ಷದ, ಮೋದಿಯ ಸಾಧನೆಗಳನ್ನು ತಲುಪಿಸಬೇಕು. ಚುನಾವಣೆ ಸಮಯದಲ್ಲಿ ಮತದಾರರನ್ನು ಬೂತ್‌ಗೆ ಕರಕೊಂಡು ಬಂದು ಮತ ಹಾಕಿಸುವ ಕೆಲಸ ಮಾಡಬೇಕು. ಕಾರ್ಯಕರ್ತರು ಸಕ್ರಿಯರಾಗಿ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.

ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ, ಹಿರಿಯರ ಆಶೀರ್ವಾದ ದಿಂದ ನನಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆ. ಈ ಕ್ಷೇತ್ರವನ್ನು ಹಿಂದುತ್ವದ ನೆಲೆಯಲ್ಲಿ ಬದಲಾವಣೆ ಮಾಡಿ ಹಿಂದುತ್ವದ ನೆಲೆಯಲ್ಲೇ ಅಭಿವೃದ್ಧಿ ಪಡಿಸುತ್ತೇನೆ. ಅಭಿವೃದ್ಧಿ ನನ್ನ ಗುರಿ ಆಗಿದೆ  ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಪಕ್ಷದಲ್ಲಿ ವಿಶ್ವಾಸ ಇಟ್ಟುಕೊಂಡ ಹಿನ್ನೆಲೆಯಲ್ಲಿ ಈ  ಬಾರಿ ನನಗೆ ಅವಕಾಶ ನೀಡಿದೆ.ಈ ಜಿಲ್ಲೆ ಸ್ವಾಭಿಮಾನಿಗಳ ಜಿಲ್ಲೆಯಾಗಿದ್ದು, ಇಲ್ಲಿನ ಕಾರ್ಯಕರ್ತರು ಪಕ್ಷದ ಮೇಲೆ ಹೆಚ್ಚು ವಿಶ್ವಾಸ ಇಟ್ಟುಕೊಂಡಿದ್ದಾರೆ. ಅವರ ವಿಶ್ವಾಸ ಉಳಿಸುವ ಜೊತೆ ಗೆ ಈ ಜಿಲ್ಲೆ ಹಿಂದುತ್ವದ ನಾಡಾಗಿ ಪರಿವರ್ತನೆ ಆಗಬೇಕು. ಇದಕ್ಕೆ ನಮ್ಮ ಪ್ರಯತ್ನ ಬಹಳಷ್ಟು ಅಗತ್ಯ ಇದೆ. ಇದಕ್ಕೆ ಏನು ಆಗಬೇಕೋ ಆ ಕೆಲಸ ನಮ್ಮಿಂದ ಆಗಬೇಕಾಗಿದೆ.ಮಂಗಳೂರು ಅಭಿವೃದ್ಧಿ ಯ ಮೂಲಕವೇ ಉಳಿದ ಊರುಗಳ ಅಭಿವೃದ್ಧಿ ಆಗಬೇಕು.ಮಂಗಳೂರು ಬೆಂಗಳೂರು ರಸ್ತೆ ಅಭಿವೃದ್ಧಿ ನಮಗೆ ಕಾಣಬೇಕು. ಈ ಎಲ್ಲಾ ಗುರಿಗಳನ್ನು ಇಟ್ಟುಕೊಂಡು ಎಪ್ರಿಲ್ ೪ ರಂದು ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಹೇಳಿದರು.

ಜಗದೀಶ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ನಿತಿನ್ ಕುಮಾರ್, ಜಿಲ್ಲಾ ಚುನಾವಣಾ ಸಂಚಾಲಕ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ದಿನೇಶ್ ಅಮ್ಟೂರ್, ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ರೈ ಬೂಡಿಯಾರ್ ಮಂಡಲದ ಚುನಾವಣಾ ಪ್ರಭಾರಿ

ಸಂತೋಷ ಕುಮಾರ್ ರೈ ಬೋಳಿಯಾರ್, ಸೀತರಾಮ ಬಂಗೇರಧನಲಕ್ಷೀ ಗಟ್ಟಿ, ಜಯಶ್ರೀ ಕರ್ಕೇರ, ರವೀಂದ್ರ ಶೆಟ್ಟಿ ಉಳಿದೊಟ್ಟು, ಮಾಜಿ ಶಾಸಕ ಜಯರಾಮ ಶೆಟ್ಟಿ, ಪ್ರತಾಪ್ ಸಿಂಹ ನಾಯಕ್, ಟಿ. ರಾಜಾರಾಮ ಭಟ್ ಉಪಸ್ಥಿತರಿದ್ದರು.

ಚಂದ್ರ ಹಾಸ್ ಪಂಡಿತ್ ಹೌಸ್ ಸ್ವಾಗತಿಸಿದರು. ಜೀವನ್ ಕುಮಾರ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿ, ದಯಾನಂದ್ ತೊಕ್ಕೊಟ್ಟು ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article