Beltangadi: ಲಕ್ಷಾಂತರ ನಗದು ವಂಚನೆ-ಪ್ರಕರಣ ದಾಖಲು

Beltangadi: ಲಕ್ಷಾಂತರ ನಗದು ವಂಚನೆ-ಪ್ರಕರಣ ದಾಖಲು

ಬೆಳ್ತಂಗಡಿ: ಉಜಿರೆಯ ಕಾಲೇಜೊಂದರ ವಿದ್ಯಾರ್ಥಿಯ ಬ್ಯಾಂಕ್ ಖಾತೆಯಿಂದ ಅಪರಿಚಿತರು ಲಕ್ಷಾಂತರ ರೂಪಾಯಿ ನಗದನ್ನು ಅಪಹರಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಉಜಿರೆ ಕಾಲೇಜೊಂದರಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿರುವ ಪ್ರದೀಪ್ ಸುರೇಶ್ ರೂಗಿ ಎಂಬವವರ ಖಾತೆಯಲ್ಲಿದ್ದ 3.14 ಲಕ್ಷ ರೂ. ಹಣವನ್ನು ಅಪಹರಿಸಲಾಗಿದೆ. 

ಮೇ. 23ರ ವರೆಗೆ ವಿದ್ಯಾರ್ಥಿ ಪ್ರದೀಪ್ ಅವರ ಖಾತೆಯಲ್ಲಿ ಹಣವಿತ್ತು. ಆ ಬಳಿಕ ಇವರ ಮೊಬೈಲ್‌ಗೆ ಸಂದೇಶಗಳು ಬಂದಿದ್ದು, ಇದರಲ್ಲಿ ಒಟಿಪಿ ಬಂದಿದೆ. ಈ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ಅವರು ಮರುದಿನ ಬೆಳಿಗ್ಗೆ ಖಾತೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅವರ ಖಾತೆಯಲ್ಲಿದ್ದ 3,14,000 ರೂ. ವನ್ನು ಯಾವುದೋ ಅನಾಮಧೇಯ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿರುವುದಕ ತಿಳಿದುಬಂದಿದೆ. ಇನ್ನು ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article