Kateel: ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಮುಕ್ತಾಯ

Kateel: ಕಟೀಲು ಯಕ್ಷಗಾನ ಮೇಳಗಳ ತಿರುಗಾಟ ಮುಕ್ತಾಯ


ಕಟೀಲು: ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಈ ವರುಷದ ತಿರುಗಾಟ 1002 ಪ್ರದರ್ಶನಗಳೊಂದಿಗೆ ಶನಿವಾರ ಮುಕ್ತಾಯಗೊಂಡಿತು. 

ಕಟೀಲು ರಥಬೀದಿಯಲ್ಲಿ ಶನಿವಾರ ರಾತ್ರಿಯಿಂದ ಮುಂಜಾನೆಯವರೆಗೆ ಮುನ್ನೂರು ಕಲಾವಿದರನ್ನೊಳಗೊಂಡ ಆರೂ ಮೇಳಗಳ ಕಲಾವಿದರು ವಿಶಾಲಾಕ್ಷಿ, ವನಜಾಕ್ಷಿ, ಮೀನಾಕ್ಷಿ, ಚಿತ್ರಾಕ್ಷಿ ಕಂಜಾಕ್ಷಿ ಪಂಚಕಲ್ಯಾಣಗಳನ್ನು ಪ್ರದರ್ಶಿಸಿ, ದೇವರ ಎದುರು ಗೆಜ್ಜೆ ಬಿಚ್ಚುವ ಕಾರ್ಯಕ್ರಮ ನಡೆಯಿತು.

ಕಟೀಲು ಮೇಳಗಳು ಈ ವರುಷ 167 ದಿನಗಳ ತಿರುಗಾಟದಲ್ಲಿ 1002 ಸೇವೆಯಾಟಗಳನ್ನು ಪ್ರದರ್ಶಿಸಿದ್ದು, ಅವುಗಳಲ್ಲಿ 553 ದೇವೀಮಾಹಾತ್ಮೆ ಪ್ರಸಂಗಗಳಾಗಿವೆ.

ಒಂದನೇ ಮೇಳ 81, ಎರಡನೇ ಮೇಳ 94, ಮೂರನೇ ಮೇಳ 105, ನಾಲ್ಕನೇ ಮೇಳ 88, ಐದನೇ ಮೇಳ 64, ಆರನೇ ಮೇಳ 61 ಬಾರಿ ದೇವೀಮಾಹಾತ್ಮೆಯನ್ನು ಆಡಿವೆ. ಆರೂ ಮೇಳಗಳು ಒಟ್ಟು 52 ಕಡೆಗಳಲ್ಲಿ ಕಟೀಲು ಕ್ಷೇತ್ರ ಮಾಹಾತ್ಮೆಯನ್ನು ಪ್ರದರ್ಶಿಸಿವೆ. 

ಈ ಬಾರಿ ಮೂರನೇ ಮೇಳದ ದೇವೀಮಾಹಾತ್ಮೆ ಪ್ರದರ್ಶನದ ಸಂಖ್ಯೆ ನೂರರ ಗಡಿ ದಾಟಿರುವುದು ವಿಶೇಷ. ಮೇ ತಿಂಗಳ ಹೆಚ್ಚಿನ ದಿನಗಳಲ್ಲಿ ಕಟೀಲಿನಲ್ಲೇ ದಿನಕ್ಕೆರಡರಂತೆ ಸೇವೆಯಾಟಗಳು ನಡೆದಿದ್ದು, ನೂರು ಮಂದಿಗೆ ಕಡಿಮೆಯಿಲ್ಲದಂತೆ ಪ್ರೇಕ್ಷಕರು ಬಯಲಾಟಗಳನ್ನು ವೀಕ್ಷಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article