Mangalore: 120 ಅಡಿ ಎತ್ತರದಿಂದ ಬಿದ್ದು ಸಾವು

Mangalore: 120 ಅಡಿ ಎತ್ತರದಿಂದ ಬಿದ್ದು ಸಾವು

ಮಂಗಳೂರು: ನೀರಿನ ಲೀಕೇಜ್ ಸರಿ ಪಡಿಸಲು ಹೋಗಿದ್ದ ವ್ಯಕ್ತಿಯೊಬ್ಬರು 120 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿರುವ ಘಟನೆ ಎಂಆರ್‌ಪಿಎಲ್‌ನಲ್ಲಿ ಮಂಗಳವಾರ ನಡೆದೆ. ಸುಮಾರು 10 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಗಳ್ ಓರನ್ (38) ಮೃತಪಟ್ಟ ವ್ಯಕ್ತಿ ಎಂದು ಗುರಿತಿಸಲಾಗಿದೆ. ಇವರು ಮೂಲತಃ ಜಾರ್ಖಾಂಡ್ ನ ರಾಂಚಿ ಜಿಲ್ಲೆಯವರಾಗಿದ್ದು, ಪ್ರಸ್ತುತ ಜೋಕಟ್ಟೆ ಪ್ರದೇಶದಲ್ಲಿ ವಾಸವಾಗಿದ್ದರು.

ಎಂಆರ್‌ಪಿಎಲ್‌ನಲ್ಲಿ ಸುಮಾರು 120 ಅಡಿ ಎತ್ತರದಲ್ಲಿರುವ ಹೈಡ್ರೋ ಕ್ರ್ಯಾಕರ್ ನಲ್ಲಿ ನೀರಿನ ವೇಗ ಪರಿಶೀಲಿಸಲು ಮಂಗಳ್ ಓರನ್ ತೆರಳಿದ್ದರು. ಆಗ ಅಲ್ಲಿ ನೀರಿನ ಸೋರುವಿಕೆ ಕಂಡು ಬಂದಿತ್ತು. ಅದನ್ನು ಸರಿಪಡಿಸುವ ಸಂದರ್ಭ ಸೋರುವಿಕೆಯಲ್ಲಿ ನೀರಿನ ಹರಿವು ಏಕಾ ಏಕಿ ಹೆಚ್ಚಾಗಿ ಮಂಗಳ್ ಓರನ್ 120 ಅಡಿ ಮೇಲಿಂದ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಅಲ್ಲಿನ ಸಿಬಂದಿ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article