Mangalore: ರೈಲು ಸಂಚಾರ ವ್ಯತ್ಯಯ

Mangalore: ರೈಲು ಸಂಚಾರ ವ್ಯತ್ಯಯ

ಮಂಗಳೂರು: ನೇತ್ರಾವತಿ ಕ್ಯಾಬಿನ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಜೂನ್ ಮೊದಲ ವಾರ ಹಳಿ ನಿರ್ವಹಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಜೂ. 1ರಂದು ಕೊಚ್ಚುವೇಲಿಯಿಂದ ಹೊರಡುವ ನಂ.16312 ಕೊಚ್ಚುವೇಲಿ-ಶ್ರೀ ಗಂಗಾನಗರ ವೀಕ್ಲಿ ಎಕ್ಸ್‌ಪ್ರೆಸ್  ರೈಲನ್ನು 3 ಗಂಟೆ 50 ನಿಮಿಷ ತಡೆಹಿಡಿಯಲಾಗುತ್ತದೆ. ಜೂ. 1ರಂದು ಕೊಚ್ಚುವೇಲಿಯಿಂದ ಹೊರಡುವ ನಂ.01464 ಕೊಚ್ಚುವೇಲಿ-ಲೋಕಮಾನ್ಯ ತಿಲಕ್(ಟಿ) ವೀಕ್ಲಿ ಎಕ್ಸ್‌ಪ್ರೆಸ್‌ನ್ನು 3 ಗಂ. 40 ನಿ. ತಡೆಹಿಡಿಯಲಾಗುತ್ತದೆ.

ಜೂ. 1ರಂದು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ನಂ.22637 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮಂಗಳೂರು ಸೆಂಟ್ರಲ್ ವೆಸ್ಟ್ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ್ನು ಮಾರ್ಗಮಧ್ಯದಲ್ಲಿ 2 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ. ಜೂ. 1ರಂದು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡಲಿರುವ ನಂ. 12685 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಮಾರ್ಗಮಧ್ಯದಲ್ಲಿ 50 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ. ಜೂ. 1ರಂದು ತಿರುವನಂತಪುರ ಸೆಂಟ್ರಲ್‌ನಿಂದ ಹೊರಡುವ ನಂ.16604 ತಿರುವನಂತಪುರ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 30 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ.

ಜೂ. 4ರಂದು ನಾಗರಕೋವಿಲ್ ಜಂಕ್ಷನ್ ಹೊರಡಲಿರುವ ನಂ. 16336 ನಾಗರಕೋವಿಲ್ ಜಂಕ್ಷನ್-ಗಾಂಧಿಧಾಮ ಬಿಜಿ ವೀಕ್ಲಿ ಎಕ್ಷ್‌ಪ್ರೆಸ್‌ನ್ನು  2 ಗಂಟೆ 20 ನಿಮಿಷ ತಡೆಹಿಡಿಯಲಾಗುತ್ತದೆ. ಜೂ.4 ಮತ್ತು 7ರಂದು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಹೊರಡಲಿರುವ ನಂ.22637 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್‌ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ್ನು 1 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ.

ಜೂ.4 ಮತ್ತು 7ರಂದು ತಿರುವನಂತಪುರ ಸೆಂಟ್ರಲ್‌ನಿಂದ  ಹೊರಡಲಿರುವ ನಂ. 12431 ತಿರುವನಂತಪುರ ಸೆಂಟ್ರಲ್-ನಿಝಾಮುದ್ದೀನ್ ಜಂಕ್ಷನ್ ರಾಜಧಾನಿ ಎಕ್ಸ್‌ಪ್ರೆಸ್‌ನ್ನು 1 ಗಂಟೆ 10 ನಿಮಿಷ, ಜೂ. 4ರಂದು ಎರ್ನಾಕುಲಂ ಜಂಕ್ಷನ್‌ನಿಂದ ಹೊರಡುವ ನಂ. 12283 ಎರ್ನಾಕುಲಂ ಜಂಕ್ಷನ್-ಹಝರತ್ ನಿಝಾಮುದ್ದೀನ್ ಜಂಕ್ಷನ್ ದುರೊಂತೋ ಸೂಪರ್ಫಾಸ್ಟ್ ವೀಕ್ಲಿ ಎಕ್ಸ್‌ಪ್ರೆಸ್  ರೈಲನ್ನು ಮಾರ್ಗಮಧ್ಯದಲ್ಲಿ 1 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ. ಎಂದು ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article