.jpeg)
Mangalore: ಅಕ್ರಮ ಚಿನ್ನ ವಶ
Wednesday, May 8, 2024
ಮಂಗಳೂರು: ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಅಕ್ರಮವಾಗಿ ಸಾಗಾಟ ಮಾಡು ತ್ತಿದ್ದ 40,40,220 ರೂ. ಮೌಲ್ಯದ 24 ಕ್ಯಾರಟ್‌ನ 576 ಗ್ರಾಂ ತೂಕದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ಸಂಜೆ ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿಯಾಗಿರುವ ಪ್ರಯಾಣಿಕ ಚಿನ್ನವನ್ನು ಸಾಗಾಟಕ್ಕೆ ಯತ್ನಿಸಿದ್ದ. ತನಿಖೆಯ ವೇಳೆ ಅನುಮಾನಗೊಂಡ ಕಸ್ಟಮ್ಸ್ ಸಿಬ್ಬಂದಿಗಳು ತಪಾಸಣೆಗೊಳಪಡಿಸಿದಾಗ ಆತನ ದೇಹದಲ್ಲಿ 3 ಅಂಡಾ ಕಾರದ ವಸ್ತು ಪತ್ತೆಯಾಗಿತ್ತು. ಪರಿಶೀಲಿಸಿದಾಗ ಅದರಲ್ಲಿ ಚಿನ್ನವನ್ನು ಸಾಗಾಟ ಮಾಡಲು ಯತ್ನಿಸಿರುವುದು ಕಂಡು ಬಂದಿದೆ.