
Mangalore: ವರುಣ ದೇವರ ಪ್ರೀತ್ಯರ್ಥ-ಶ್ರೀಕ್ಷೇತ್ರ ಕದ್ರಿಯಲ್ಲಿ ಪರ್ಜನ್ಯಜಪ
ಮಂಗಳೂರು: ಅಖಿಲ ಭಾರತ ಬ್ರಾಹ್ಮಣ ಒಕ್ಕೂಟದ ಆಶ್ರಯದಲ್ಲಿ ವರುಣ ದೇವರ ಪ್ರೀತ್ಯರ್ಥ ಶ್ರೀ ಕ್ಷೇತ್ರ ಕದ್ರಿಯ ಕೆರೆಯ ಆವರಣದಲ್ಲಿ ಮೇ.6 ರಂದು ಪರ್ಜನ್ಯ ಜಪ-ರುದ್ರಪಾರಾಯಣವು ಜರಗಿತು.
ಕಲ್ಕೂರ ಪತ್ರಿಷ್ಠಾನ ಸಂಯೋಜನೆಯೊಂದಿಗೆ ನಡೆದ ಈ ಕಾರ್ಯಕ್ರಮವು ವೇದ ವಿದ್ವಾಂಸ ವಿದ್ವಾನ್ ಕದ್ರಿ ವಿಠಲದಾಸ ತಂತ್ರಿಗಳ ಮಾರ್ಗದರ್ಶನದೊಂದಿಗೆ ನೆರವೇರಿತು. ಶ್ರೀಕ್ಷೇತ್ರ ಕದ್ರಿಯ ಪ್ರಧಾನ ಅರ್ಚಕ ರಾಘವೇಂದ್ರ ಅಡಿಗ, ರಾಮಹೊಳ್ಳರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ವಿಪ್ರ ಸಮೂಹ ಕೊಂಚಾಡಿ, ಶಿವಳ್ಳಿ ಸ್ಪಂದನ, ಹವ್ಯಕ ಸಭಾ, ಸ್ಥಾನಿಕ ಬ್ರಾಹ್ಮಣ ಸುಬ್ರಹ್ಮಣ್ಯ ಸಭಾ, ಕೂಟ ಮಹಾಜಗತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಒಕ್ಕೂಟದ ಅನೇಕ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಮುಂದಾಳುತ್ವ ವಹಿಸಿದ್ದರು. ವಿಪ್ರಬಳಗದ ರಾಮಕೃಷ್ಣ ರಾವ್, ಸುಧಾಕರ ರಾವ್ ಪೇಜಾವರ, ಕದ್ರಿ ಗಣೇಶ್ ಹೆಬ್ಬಾರ್, ಉದಯ ಕುಮಾರ್ ಸುಬ್ರಹ್ಮಣ್ಯ ಸದನ, ಶಶಿಪ್ರಭಾ ಐತಾಳ್, ಕದ್ರಿ ವಾಸುದೇವ ಭಟ್, ಡಾ. ಎಸ್.ಎನ್. ಶರ್ಮ ನಿವೃತ್ತ ಪ್ರೊಫೆಸರ್ ಗಿರೀಶ್ಚಂದ್ರ ಎ.ಟಿ., ವಿಶ್ವಪತಿ ಮೊಳೆಯಾರ, ಕೇಶವ ನಂದೋಡಿ, ಶಿವರಾಮ ರಾವ್, ಶ್ರೀಕಾಂತ್ ರಾವ್ ಸಹಿತ ಅನೇಕ ಮಂದಿ ಪರ್ಜನ್ಯ ಜಪ-ರುದ್ರ ಪಾರಾಯಣದಲ್ಲಿ ಪಾಲ್ಗೊಂಡಿದ್ದರು.