Mangalore: ಬ್ರ್ಯಾಂಡ್ ಮಂಗಳೂರಿಗೆ ಮಸಿ ಬಳಿಯುವ ಕೆಲಸ ಮಾಡಬೇಡಿ: ಮಂಜುನಾಥ ಭಂಡಾರಿ

Mangalore: ಬ್ರ್ಯಾಂಡ್ ಮಂಗಳೂರಿಗೆ ಮಸಿ ಬಳಿಯುವ ಕೆಲಸ ಮಾಡಬೇಡಿ: ಮಂಜುನಾಥ ಭಂಡಾರಿ


ಮಂಗಳೂರು: ಬೋಳಿಯಾರ್‌ನಲ್ಲಿ ನಡೆದ ಚೂರಿ ಇರಿತ ಪ್ರಕರಣದಲ್ಲಿ ರಾಜಕೀಯವನ್ನು ತಂಡು ನಗರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬ್ರ್ಯಾಂಡ್ ಮಂಗಳೂರಿಗೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮನವಿ ಮಾಡಿದರು.

ಅವರು ಜೂ.14 ರಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಬೋಳಿಯಾರ್ ಘಟನೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಯಾರೇ ಆರೋಪಿಗಳಿರಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಬಿಜೆಪಿಯವರು ಕರಾವಳಿತನ್ನು ಪ್ರಾಯೋಗಿಕ ಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಕರಾವಳಿ ಅವರಿಗೆ ಅಭಿವೃದ್ಧಿಯಾಗುವುದು ಬೇಕಾಗಿಲ್ಲ ಎಂದು ಆರೋಪಿಸಿದರು.

ಬೋಳಿಯಾರ್ ಘಟನೆಯೊಂದು ಪೂರ್ವ ನಿಯೋಜಿತವಾಗಿದ್ದು, ಇಲ್ಲಿಯ ಶಾಂತಿ, ಸುವ್ಯವಸ್ಥೆಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ವಿಜಯೋತ್ಸವವನ್ನು ಆಚರಿಸುವ ಹಕ್ಕಿದೆ. ಆದರೆ ಅವರುಗಳು ತಮ್ಮ ಕಚೇರಿಯ ಎದುರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆಚರಿಸುವುದನ್ನು ಬಿಟ್ಟು ಧಾರ್ಮಿಕ ಸ್ಥಳವಿರುವಲ್ಲಿ ಬಂದು ವಿಜಯೋತ್ಸವ ಆಚರಿಸುವುದಲ್ಲ. ಮಾತ್ರವಲ್ಲ ಇಂತಹ ಸ್ಥಳದಲ್ಲಿ ಘೋಷಣೆಗಳನ್ನು ಕೂಗುವುದು, ಯಾರೇ ಒಬ್ಬ ವ್ಯಕ್ತಿಯನ್ನು ಗುರುಯಾಗಿಸಿ ಬೇಡದ್ದನ್ನು ಮಾತನಾಡಿ ಪ್ರಚೋದಿಸುವುದು ಸರಿಯಲ್ಲ ಎಂದು ದೂರಿದರು.

ಜಿಲ್ಲೆಗೆ ರಾಜ್ಯ ಮಟ್ಟದ ನಾಯಕರುಗಳು ಬಂದು ಪ್ರಚೋದನಕಾರಿ ಮಾತನಾಡಿ, ಇನ್ನಷ್ಟು ಉದ್ರೇಕಗೊಳಿಸುವುದು ಎಷ್ಟು ಸರಿ? ಶಾಸಕರುಗಳು ಕೇವಲ ಒಂದು ಕಡೆಗೆ ಮಾತನಾಡುವುದು ಎಷ್ಟು ಸರಿ? ರಾಜ್ಯದ ಎಲ್ಲಾ ಬಿಜೆಪಿ ನಾಯಕರುಗಳು ಜಿಲ್ಲೆಗೆ ಮಸಿ ಬಳಿಯುವ ಕೆಲಸ ಮಾಡಬೇಡಿ. ಚೂರಿ ಹಾಕುವುದು ಸರಿಯಲ್ಲ ಆದರೆ ಯಾಕೆ ಚೂರಿ ಹಾಕಿದರು ಎಂಬುವುದನ್ನು ಮುಚ್ಚಿಟ್ಟು ಕೇವಲ ಚೂರಿ ಹಾಕಿದ್ದಾರೆ ಎಂದು ಜನರನ್ನು ಪ್ರಚೋದಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಮುಖರಾದ ಮಮತಾ ಗಟ್ಟಿ, ಪದ್ಮರಾಜ್ ಆರ್. ಪೂಜಾರಿ, ಸಾಹುಲ್ ಹಮೀದ್, ಶಾಲೆಟ್ ಪಿಂಟೋ, ಜೋಕಿಮ್ ಡಿ’ಸೋಜಾ, ಶುಭೋದಯ ಆಳ್ವಾ, ನಝೀರ್ ಬಜಾಲ್ ಉಪಸ್ಥಿತರಿದ್ದರು.


ಸಣ್ಣ ಮಟ್ಟದ ರಾಜಕೀಯವನ್ನು ಕಾಂಗ್ರೆಸ್ ಮಾಡುವುದಿಲ್ಲ:

ಬಿಜೆಪಿಯವರು ಯಡಿಯೂರಪ್ಪ ಅವರ ವಿರುದ್ಧ ಕಾಂಗ್ರೆಸ್ ಕೇಸ್ ದಾಖಲಿಸಿದೆ ಎಂಬುವುದಾಗಿ ಹೇಳುತ್ತಿದ್ದು, ಯಡಿಯೂರಪ್ಪ ಅವರ ವಿರುದ್ಧ ದೂರು ಕೇಳಿ ಬಂದರೂ ೩ ತಿಂಗಳಿನಿಂದ ಸುಮ್ಮನಿದ್ದವರು ನಾವು ಈಗ ಸಂತ್ರಸ್ಥೆ ಬಾಲಕಿಯ ತಾಯಿಯ ಅಣ್ಣ ದೂರು ದಾಖಲಿಸಿದ್ದು, ನ್ಯಾಯಾಲಯದ ನಿರ್ದೇಶನದಂತೆ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. ಇದರಲ್ಲಿ ಕಾಂಗ್ರೆಸ್‌ನ ಯಾವುದೇ ಕೈವಾಡವಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೇಂದ್ರದಲ್ಲಿಯೂ ಬಿಜೆಪಿ ಆಡಳಿತದಲ್ಲಿ ಇದ್ದಂತಹ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸಿ ಸಣ್ಣ ಮಟ್ಟದ ರಾಜಕೀಯ ಮಾಡಿದವರು ಯಾರು? -ಮಂಜುನಾಥ ಭಂಡಾರಿ, ಕೆಪಿಸಿಸಿ ಕಾರ್ಯಧ್ಯಕ್ಷರು, ವಿಧಾನಪರಿಷತ್ ಸದಸ್ಯರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article