
Mulki: ಬೈಕ್ ಕಳ್ಳತನ ಆರೋಪಿಗಳ ಬಂಧನ
Saturday, June 15, 2024
ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಬಪ್ಪನಾಡು ಗ್ರಾಮದ ಬಪ್ಪನಾಡು ದ್ವಾರದ ಬಳಿ ಕಳೆದ ಮೇ ೨೪ರಂದು ನಿತೇಶ್ ಭಂಡಾರಿ ಎಂಬವರು ನಿಲ್ಲಿಸಿದ್ದ ಬೈಕ್(ಕೆ ಎ 19 ಎಚ್ ಡಿ0090) ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯ ಪುನರೂರು ಸಮೀಪದ ಚೆಕ್ಪೋಸ್ಟ್‌ನಲ್ಲಿ ಮೂಲ್ಕಿ ಪೊಲೀಸರು ಕಳವಾದ ಬೈಕ್ ಸಮೇತ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಅಂಬೇಡ್ಕರ್ ನಗರ ನಾಲತವಾಡನ ನಿವಾಸಿಗಳಾದ ಮೌನೇಶ್ ಭಜಂತ್ರಿ (23), ಮಹಮ್ಮದ್ ಸಮೀರ್ (20), ವೀರಭದ್ರಪ್ಪ(24) ಎಂದು ಗುರುತಿಸಲಾಗಿದೆ.
ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್ ಅವರ ಮಾರ್ಗದರ್ಶನದಂತೆ ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಮನೋಜ್ ಕುಮಾರ್, ಮೂಲ್ಕಿ ಪೊಲೀಸ್ ಠಾಣಾ ನಿರೀಕ್ಷಕರಾದ ವಿದ್ಯಾರ್ಥಿ ಅವರ ನೇತೃತ್ವದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಪಿಎಸ್‌ಐ ವಿನಾಯಕ ಬಾವಿಕಟ್ಟೆ, ಎಎಸ್‌ಐ ಸಂಜೀವ, ಎಚ್‌ಸಿ ಕಿಶೋರ್, ಚಂದ್ರಶೇಖರ್ ಮತ್ತಿತರರು ಸಹಕರಿಸಿದ್ದರು.