Mangalore: ಅಂತರಾಷ್ಟ್ರೀಯ ಸಮ್ಮೇಳನ ’ಮ್ಯಾಗ್ನಂ’ ಹಾಗೂ ರಾಷ್ಟ್ರೀಯ ಮಟ್ಟದ ಕಾಮರ್ಸ್, ಮ್ಯಾನೇಜ್ ಮೆಂಟ್ ಮತ್ತು ಕಲ್ಚರಲ್ ಫೆಸ್ಟ್ ನ ಉದ್ಘಾಟನೆ

Mangalore: ಅಂತರಾಷ್ಟ್ರೀಯ ಸಮ್ಮೇಳನ ’ಮ್ಯಾಗ್ನಂ’ ಹಾಗೂ ರಾಷ್ಟ್ರೀಯ ಮಟ್ಟದ ಕಾಮರ್ಸ್, ಮ್ಯಾನೇಜ್ ಮೆಂಟ್ ಮತ್ತು ಕಲ್ಚರಲ್ ಫೆಸ್ಟ್ ನ ಉದ್ಘಾಟನೆ

ಸವಾಲು ಎದುರಿಸಿ ಮುನ್ನಡೆದರೆ ಯಶಸ್ಸು: ಪ್ರೊ. ಪಿ.ಎಲ್. ಧರ್ಮ


ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿವಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಅಂತರಾಷ್ಟ್ರೀಯ ಸಮ್ಮೇಳನ ’ಮ್ಯಾಗ್ನಂ’ ಹಾಗೂ ರಾಷ್ಟ್ರೀಯ ಮಟ್ಟದ ಕಾಮರ್ಸ್, ಮ್ಯಾನೇಜ್ ಮೆಂಟ್ ಮತ್ತು ಕಲ್ಚರಲ್ ಫೆಸ್ಟ್ ನ ಉದ್ಘಾಟನೆಯು ಗುರುವಾರ ನಡೆಯಿತು.

ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಸವಾಲುಗಳೂ ಇವೆ ಜೊತೆಗೆ ಅನೇಕ ಅವಕಾಶಗಳೂ ನಮ್ಮೆದುರು ಇವೆ. ಓದು, ಕಠಿಣ ಪರಿಶ್ರಮದೊಂದಿಗೆ ಸವಾಲುಗಳನ್ನು ಎದುರಿಸಿ ಮುನ್ನಡೆದರೆ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಹೇಳಿದರು. 

ಮುಖ್ಯ ಅತಿಥಿ ಮಲೇಷಿಯಾ ಏಷಿಯನ್ ಗ್ರೂಫ್ ಆಫ್ ಇನ್ ಸ್ಟಿಟ್ಯೂಷನ್ ನ ಪ್ರಾಧ್ಯಾಪಕ ಹಾಗೂ ಮ್ಯಾನೇಜ್‌ಮೆಂಟ್ ಕೋಚ್ ಆಗಿರುವ ಡಾ.ಶರಣ್ ಕುಮಾರ್ ಶೆಟ್ಟಿ, ಭಾರತದಲ್ಲಿ ಬ್ಯಾಂಕ್ ಗಳು ಹಲವು ದಶಕಗಳ ಹಿಂದೆ ಹೇಗಿದ್ದವು ಹಾಗೂ ಇಂದಿನ ಬದಲಾವಣೆ ಸ್ಥಿತಿಗತಿಯ ಬಗ್ಗೆ ಅರಿತುಕೊಳ್ಳಬೇಕು. ಕೈಗಾರಿಕೋದ್ಯಮ, ಬ್ಯಾಂಕಿಂಗ್, ವಾಣಿಜ್ಯೋದ್ಯಮ ಕ್ಷೇತ್ರಗಳ ಬಗ್ಗೆ ಹೆಚ್ಚೆಚ್ಚು ಅಧ್ಯಯನ, ಸಂಶೋಧನೆಗಳು ನಡೆಯಬೇಕು ಎಂದರು. 

ಕುಲಸಚಿವ ರಾಜು ಮೊಗವೀರ ಹಾಗೂ ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಂ.ಪಿ. ಸುಬ್ರಹ್ಮಣ್ಯ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ವಿಭಾಗದ ಅಧ್ಯಕ್ಷೆ  ಡಾ. ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.

ಕಾನ್ಪಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಅಜಿತ್ ಕಾಮತ್, ಬ್ಯಾಂಕ್ ಆಫ್ ಬರೋಡಾ ಇದರ ವಲಯ ಜನರಲ್ ಮ್ಯಾನೇಜರ್ ರಾಜೇಶ್ ಖನ್ನ, ಯೂನಿಯನ್ ಬ್ಯಾಂಕ್ ನ ವಲಯ ಜನರಲ್ ಮ್ಯಾನೇಜರ್ ರೇಣುಕಾನಾಯರ್, ಪ್ರಾಧ್ಯಾಪಕರಾದ ಪ್ರೊ.ಈಶ್ವರ ಪಿ, ಪ್ರೊ.ಮುನಿರಾಜು, ಡಾ.ವೇದವ ಪಿ, ಡಾ.ಪರಮೇಶ್ಚರ, ಉಪನ್ಯಾಸಕರಾದ ಡಾ.ದಿನಕರ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂಘದ ಶಿವಪ್ರಸಾದ್, ಮನ್ವಿತ್ ಶೆಟ್ಡಿ, ಭೂಮಿಕಾ ಕೆ.ಆರ್, ಮಹಂತೇಶ್, ರೇಖಾ ಕೆ.ಪಿ. ಶರಣ್ಯ, ವೆಂಕಟೇಶ್, ಪವಿತ್ರಾ,ಪಿ. ಖೈರುನ್ನಿಸಾ ಮೊದಲಾದವರು ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಸಮ್ಮೇಳನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ರಶ್ಮಿತಾ ಕೋಟ್ಯಾನ್ ಸ್ಬಾಗತಿಸಿದರು. ವಿದ್ಯಾರ್ಥಿನಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article