
Mangalore: ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಅಭಿಯಾನ
Friday, June 21, 2024
ಮಂಗಳೂರು: ಯುವ ಮುನ್ನಡೆ ಕರ್ನಾಟಕ ಇದರ ಯುವ ಮುಂದಾಳುಗಳ ತಂಡವು ಸ್ಟೇಟ್‌ಬ್ಯಾಂಕ್ ನಿಲ್ದಾಣದಲ್ಲಿ ಅಗತ್ಯ ಸೌಕರ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಸ್ಟೇಟ್‌ಬ್ಯಾಂಕ್ ಬಸ್ಸು ನಿಲ್ದಾಣವು ಹೇಗೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ತಿಳಿಸಿದರು.
ಪ್ರಯಾಣಿಕರು, ಬಸ್ಸು ಚಾಲಕ, ನಿರ್ವಾಹಕರು, ಗೂಡಂಗಡಿ, ಮೀನಿನ ವ್ಯಾಪಾರಿಗಳು, ಗುಜರಿ ಅಂಗಡಿ, ಸಣ್ಣ ಹೊಟೇಲ್ ನಡೆಸುವವರು, ಸ್ವಚ್ಛತಾ ಕರ್ಮಿಗಳ ಜೊತೆ ಚಹಾ ಮತ್ತು ಉಪಹಾರ ನೀಡಿ ಮಾತುಕತೆ ಮಾಡುತ್ತ ಅಭಿಯಾನವನ್ನು ಹಮ್ಮಿಕೊಂಡರು. ಸಾರ್ವಜನಿಕರಿಂದ ಬಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಹಿ ಮಾಡಿದ ಮನವಿ ಪತ್ರದೊಂದಿಗೆ ಅಭಿಯಾನದ ಭಾಗವಾಗಿ ಯುವಮುಂದಾಳುಗಳು ಅಪರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.