
Ujire: ಸಿ.ಎ. ಮತ್ತು ಕಂಪನಿ ಸೆಕ್ರೆಟರಿ, ಪರೀಕ್ಷಾ ಮಾಹಿತಿ ಕಾರ್ಯಗಾರ
Friday, June 21, 2024
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸಿ.ಎ. ಹಾಗೂ ಕಂಪನಿ ಸೆಕ್ರೆಟರಿ ಕೋರ್ಸ್ ಬಗ್ಗೆ ಮಾಹಿತಿ ಶಿಬಿರವು ನಡೆಯಿತು.
ಪರೀಕ್ಷಾ ಅಕಾಡಮಿಯ ಚಂದನ್ ರಾವ್ ಮತ್ತು ಸಿ.ಎ., ಸಿ.ಎಸ್. ಸಾಹಿಲ್ ಶರ್ಮ ಇವರು ಸಂಪನ್ಮೂಲಗಳ ವ್ಯಕ್ತಿಗಳಾಗಿ ಭಾಗವಹಿಸಿ, ಸಿ.ಎ. ಮತ್ತು ಕಂಪನಿ ಸೆಕ್ರೆಟರಿ ಕೋಸ್೯ಗಳ ವಿಪುಲ ಅವಕಾಶಗಳ ಬಗ್ಗೆ ಮತ್ತು ಪರೀಕ್ಷಾ ತಯಾರಿ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಮೋದ್ ಕುಮಾರ್ ಶುಭ ಹಾರೈಸಿದರು. ವಿಭಾಗ ಮುಖ್ಯಸ್ಥೆ ಬೇಬಿ ಎನ್. ಹಾಗೂ ಸವಿತ, ಪ್ರಭಾವತಿ, ಶೋಭಾ ಉಪಸ್ಥಿತರಿದ್ದರು.