
Moodubidire: "ಜೆಸಿಐ ಲೀಡರ್ ಟ್ರೈನಿಂಗ್ ಸೀರೀಸ್ನಲ್ಲಿ ಲೀಡಿಂಗ್ ಚೇಂಜ್" ತರಬೇತಿ
Tuesday, June 25, 2024
ಮೂಡುಬಿದಿರೆ: ಮೂಡಬಿದಿರೆ ಜೆಸಿಐ ತ್ರಿಭುವನ್ ವತಿಯಿಂದ ಮಂಗಳೂರಿನ ಸೈಂಟ್ ಆಲೋಸಿಯಸ್ ಐಟಿಐನಲ್ಲಿ ಜೆಸಿಐ ಲೀಡರ್ ಟ್ರೈನಿಂಗ್ ಸೀರೀಸ್ನಲ್ಲಿ ಲೀಡಿಂಗ್ ಚೇಂಜ್ ಎಂಬ ವಿಷಯದಲ್ಲಿ ತರಬೇತಿ ನಡೆಯಿತು.
ವಲಯ ತರಬೇತುದಾರ ರೇಮಂಡ್ ಡಿಕೋನ್ನ ಅವರು ತರಬೇತಿಯನ್ನು ನಡೆಸಿಕೊಟ್ಟರು.
ನಂತರ ತಾಂತ್ರಿಕ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನಡೆಸಲಾಯಿತು. ಇದರಲ್ಲಿ ಮದರ್ ಬೋರ್ಡಿನ ಸರ್ವಿಸಿಂಗ್ ಬಗ್ಗೆ ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ಮೂಡುಬಿದಿರೆ ಜೇಸಿಐನ ಅಧ್ಯಕ್ಷ ಪ್ರದೀಪ್ ಕುಮಾರ್, ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.