Bantwal: ಜಾಕ್‌ವೆಲ್‌ಗಾಗಿ ಬಂಡೆ ಸ್ಫೋಟ-ಗ್ರಾಮಸ್ಥರಿಂದ ತಡೆ

Bantwal: ಜಾಕ್‌ವೆಲ್‌ಗಾಗಿ ಬಂಡೆ ಸ್ಫೋಟ-ಗ್ರಾಮಸ್ಥರಿಂದ ತಡೆ


ಬಂಟ್ವಾಳ: ಪುತ್ತೂರಿಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾ.ಪಂ. ಮತ್ತು ಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ಮಧ್ಯೆದ ಕುಂದಾಯಮಜಲು ಎಂಬಲ್ಲಿ  ನದಿತೀರದಲ್ಲಿ ಜಾಕ್ ವೆಲ್ ನಿರ್ಮಾಣಕ್ಕಾಗಿ ಬಂಡೆಕಲ್ಲನ್ನು ಸ್ಪೋಟಿಸಿದರಿಂದ ಹಲವಾರು ಮನೆಗಳಿಗೆ ಹಾನಿಯಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಗುರುವಾರ ಹಠಾತ್ ಪ್ರತಿಭಟನೆ ನಡೆಸಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ ಘಟನೆ ನಡೆದಿದೆ.

ನೀರು ಸರಬರಾಜಿಗಾಗಿ ಕಂದಾಯ ಮಜಲಿನ ನದಿತೀರದಲ್ಲಿ ಕಾಮಗಾರಿಯ ಗುತ್ತಿಗೆ ಸಂಸ್ಥೆಯು ಅಕ್ರಮವಾಗಿ ಬಂಡೆಕಲ್ಲು ಸ್ಪೋಟಿಸುತ್ತಿದ್ದು,ಬುಧವಾರ ರಾತ್ರಿ ವೇಳೆ ಬಂಡೆಕಲ್ಲನ್ನು ಸ್ಪೋಟಿಸಿದ ಪರಿಣಾಮ ಪರಿಸರದ  ಹಲವಾರು ಮನೆಗಳ ಗೋಡೆ ಬಿರುಕು ಬಿಟ್ಟು ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.

ಬಂಡೆ ಸ್ಪೋಟದಿಂದ ತೊಂದರೆಗೊಳಗಾದ ಗ್ರಾಮಸ್ಥರು ಬೆಳಿಗ್ಗೆ ಕಾಮಗಾರಿ ಸ್ಥಳದಲ್ಲಿ ಹಠಾತ್ ಪ್ರತಿಭಟನೆ ನಡೆಸಿದ್ದು,ಸುದ್ದಿ ತಿಳಿದ ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಹಾಗೂ  ಗ್ರಾ.ಪಂ. ಸದಸ್ಯರುಗಳಾದ ಪ್ರಕಾಶ್, ಯೋಗೀಶ್, ಬಾಳ್ತಿಲ ಗ್ರಾ.ಪಂ. ಸದಸ್ಯ ಶಿವರಾಜ್ ಹಾಗೂ ಸ್ಥಳೀಯ ದೈವಸ್ಥಾನವೊಂದರ ಪ್ರಮುಖ ದಿನೇಶ್ ಸಹಿತ ಪ್ರಮುಖರು ಸ್ಥಳಕ್ಕೆತೆರಳಿ ಪ್ರತಿಭಟನಾಕಾರರಿಗೆ ಸಾಥ್ ನೀಡಿದರು.

ಕಳೆದ ಹಲವು ದಿನಗಳಿಂದ ಬಂಡೆಗಳನ್ನು ಸ್ಪೋಟಿಸಲಾಗುತ್ತಿದ್ದು, ಸಂಬಂಧಪಟ್ಟವರಿಗೆ ಇದರಿಂದಾಗುವ ತೊಂದರೆಯ ಬಗ್ಗೆ ತಿಳಿಸಲಾಗಿದ್ದರೂ ಬುಧವಾರ ದೊಡ್ಡಪ್ರಮಾಣದಲ್ಲಿ ಸ್ಪೋಟಕಾರ್ಯ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಹಠಾತ್  ಪ್ರತಿಭಟನೆ ನಡೆಸಿದ್ದು, ಮಾಹಿತಿ ಪಡೆದ ಗುತ್ತಿಗೆ ಸಂಸ್ಥೆಯ ಮೆನೇಜರ್ ಶ್ರಿನಿವಾಸ್ ಕುಲಕರ್ಣಿ ಎಂಬವರು ಸ್ಥಳಕ್ಕಾಗಮಿಸಿ ಪ್‌ಋಇಭಟನಾಕಾರರ ಅಹವಾಲು ಅಲಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article