
Moodubidire: ಕೆ.ಡಿ.ಪಿ. ಸಮಿತಿಗೆ ಆರು ಮಂದಿ ಆಯ್ಕೆ
Friday, July 5, 2024
ಮೂಡುಬಿದಿರೆ: ಮೂಡುಬಿದಿರೆ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿ (ಕೆ.ಡಿ.ಪಿ)ಗೆ ಮೂಡುಬಿದಿರೆ ವಲಯದ ಆರು ಮಂದಿ ನಾಮನಿರ್ದೇಶನಗೊಂಡಿದ್ದಾರೆ.
ಪ್ರವೀಣ್ ಪೂಜಾರಿ ಇರುವೈಲು, ಅಭಿನಂದನ್ ಬಲ್ಲಾಳ್ ಪಡುಮಾರ್ನಾಡು, ಟಿ.ಎನ್. ಕೆಂಬಾರೆ ಕಡಂದಲೆ, ಜೋಕಿಮ್ ಕೊರೆಯಾ ಕಲ್ಲಮುಂಡ್ಕೂರು, ಶಶಿಧರ ಎಮ್. ಮಾಂಟ್ರಾಡಿ ಹಾಗೂ ಶುಭಾ ಎಸ್.ಪೂಜಾರಿ ಬೆಳುವಾಯಿ ಕೆ.ಡಿ.ಪಿ. ಸಮಿತಿ ಸದಸ್ಯರಾಗಿ ಆಯ್ಕೆಯಾದವರು.