
Subramanya: ಸುಬ್ರಹ್ಮಣ್ಯದಲ್ಲಿ ತೀರ್ಥ ಸ್ಥಾನಕ್ಕೆ ಪರ್ಯಾಯ ವ್ಯವಸ್ಥೆ
Thursday, July 4, 2024
ಸುಬ್ರಹ್ಮಣ್ಯ: ಮಳೆಗಾಲದ ಸಮಯದಲ್ಲಿ ಕುಮಾರಧಾರ ನದಿಯಲ್ಲಿ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು ಸ್ಥಾನಘಟ್ಟದಲ್ಲಿ ನೀರಿನ ಸೆಳೆತ ಜಾಸ್ತಿ ಇರುವುದರಿಂದ ಸುಮಾರು ಒಂದು ವಾರದಿಂದೀಚೆ ಭಕ್ತಾದಿಗಳಿಗೆ ತೀರ್ಥ ಸ್ಥಾನಕ್ಕೆ ಅವಕಾಶವಿರಲಿಲ್ಲ.
ಇದೀಗ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಭಕ್ತಾದಿಗಳಿಗೆ ತೀರ್ಥ ಸ್ಥಾನ ಮಾಡಲು ಕುಮಾರಧಾರ ಸ್ಥಾನಗಟ್ಟದಲ್ಲಿ ದೇವಳದ ವತಿಯಿಂದ ನೀರಿನ ಡ್ರಮ್ಮಗಳನ್ನು ಇಟ್ಟು ಅವಕಾಶ ಮಾಡಿಕೊಟ್ಟಿರುತ್ತಾರೆ. ಇದನ್ನು ದೇವಳಕ್ಕೆ ಬರುವ ಭಕ್ತಾದಿಗಳು ಉಪಯೋಗಿಸಿಕೊಳ್ಳಬಹುದಾಗಿದೆ.