Mangalore: ಜು.22-23: ಮೆಗಾ ಯೋಗ ಮ್ಯಾರಥಾನ್

Mangalore: ಜು.22-23: ಮೆಗಾ ಯೋಗ ಮ್ಯಾರಥಾನ್

ಮಂಗಳೂರು: ಯೇನೆಪೊಯ ವೈದ್ಯಕೀಯ ಕಾಲೇಜಿನ ರಜತ ಮಹೋತ್ಸವ ಆಚರಣೆಯ ಭಾಗವಾಗಿ ಈಗಾಗಲೇ ಹಲವು ಸರಣಿ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಜು.22-23ರಂದು ಮೆಗಾ ಯೋಗ ಮ್ಯಾರಥಾನ್ ಕಾರ್ಯಕ್ರಮವನ್ನು ಕಾಲೇಜು ಕ್ಯಾಂಪಸ್‌ಆಯೋಜಿಸಲಾಗಿದೆ.

ಜು.22ರಂದು ಬೆಳಗ್ಗೆ 8.30ಕ್ಕೆ ಪ್ರಾರಂಭವಾಗುವ ಮೆಗಾಯೋಗ ಮ್ಯಾರಥಾನ್ನ್ನು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಇಫ್ತಿಕರ್ ಅಲಿ ಉದ್ಘಾಟಿಸಲಿದ್ದಾರೆ. 25 ಗಂಟೆಗಳ ಯೋಗ ಪ್ರದರ್ಶನ ಜು.23ರಂದು ಬೆಳಗ್ಗೆ 10 ಗಂಟೆಗೆ ಸಂಪನ್ನಗೊಳ್ಳಲಿದೆ. ಯೋಗ ತರಬೇತುದಾರ ಕುಶಾಲಪ್ಪಗೌಡ ಅವರು ತರಬೇತಿ ನೀಡಲಿದ್ದು, ಜಿಲ್ಲೆಯ ವಿವಿಧ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರತಿ 1.30 ಗಂಟೆಯ ಅವಧಿಯ ಯೋಗ ತರಬೇತಿಯಲ್ಲಿ ಭಾಗವಹಿಲಿದ್ದಾರೆ. ಸುಮಾರು 2,500ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್. ಮೂಸಬ್ಬ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯೋಗ ತರಬೇತುದಾರ ಕುಶಾಲಪ್ಪ ಗೌಡ ಮಾತನಾಡಿ, ನಿರಂತರ ಯೋಗ ತರಬೇತಿ ಕಾರ್ಯಕ್ರಮ ಗೋಲ್ಡನ್ ಬುಕ್ ಆಫ್ ರೆಕಾರ್ಡ್ನಲ್ಲಿ 2 ದಾಖಲೆ ಮಾಡಲಿದ್ದು, ಇಂದೋರ್ನಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕೇಂದ್ರ ಆಯುಷ್ ಸಚಿವಾಲಯದ ಯೋಗದ ಹಿರಿಯ ಸಲಹೆಗಾರ ಡಾ. ಹಿಮಾನಿ ಶೋಖಂಡ್ ಅವರು ಭಾಗವಹಿಸಲಿದ್ದಾರೆ ಎಂದರು.

ಡಾ. ಅಶ್ವಿನಿ ಶೆಟ್ಟಿ ಮಾತನಾಡಿ, ಜು.23ರಂದು ಸಂಜೆ ಕಾಲೇಜಿನ ಸಿಬಂದಿ ಮತ್ತು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಲಿದೆ. ಜು.27ರಂದು ರಜತ ಮಹೋತ್ಸವ ಆಚರಣೆಯ ಸಮಾರೋಪ ಸಮಾರಂಭ ನಡೆಯಲಿದೆ. ಐಸಿಎಂಆರ್ನ ಮಾಜಿ ಮಹಾನಿರ್ದೇಶಕರಾದ ಪ್ರೊ. ನಿರ್ಮಲ್ ಕುಮಾರ್ ಗಂಗೂಲಿ ಮತ್ತು ಡಾ. ವಿಶ್ವ ಮೋಹನ್ ಕಟೋಚ್ ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆ. ಇದೇ ವೇಳೆ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಡಾ. ಅನಿಲ್ ಕೆ. ಕಾಕುಂಜೆ, ಡಾ. ವಿಜಯೇಂದ್ರ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article