ಬ್ಯಾಂಕ್ ಆಫ್ ಬರೋಡದ ಬೈಕಂಪಾಡಿ ಶಾಖೆಯ ವತಿಯಿಂದ ಕುಡುಂಬೂರು ನಡುಗಿರಿ ಗ್ರಾಮ ದೈವ ಜಾರಂದಾಯ ಹಾಗೂ ಸಪರಿವಾರ ದೈವಸ್ಥಾನಕ್ಕೆ ವಾಟರ್ ಫಿಲ್ಟರ್ ಕೊಡುಗೆ

ಬ್ಯಾಂಕ್ ಆಫ್ ಬರೋಡದ ಬೈಕಂಪಾಡಿ ಶಾಖೆಯ ವತಿಯಿಂದ ಕುಡುಂಬೂರು ನಡುಗಿರಿ ಗ್ರಾಮ ದೈವ ಜಾರಂದಾಯ ಹಾಗೂ ಸಪರಿವಾರ ದೈವಸ್ಥಾನಕ್ಕೆ ವಾಟರ್ ಫಿಲ್ಟರ್ ಕೊಡುಗೆ


ಬೈಕಂಪಾಡಿ: ಇಲ್ಲಿನ ಬೈಕಂಪಾಡಿ ಕೈಗಾರಿಕಾ ವಲಯದ ಮುಂಗಾರು ಬಸ್ ನಿಲ್ದಾಣದ ಸಮೀಪದಲ್ಲಿರುವ ಕುಡುಂಬೂರು ನಡುಗಿರಿ ಗ್ರಾಮ ದೈವ ಜಾರಂದಾಯ ಹಾಗೂ ಸಪರಿವಾರ ದೈವಸ್ಥಾನಕ್ಕೆ ಬ್ಯಾಂಕ್ ಆಫ್ ಬರೋಡದ 117ನೇ ವರುಷದ ಸ್ಥಾಪಕರ ದಿನಾಚರಣೆಯ ಅಂಗವಾಗಿ ಬ್ಯಾಂಕ್ ಆಫ್ ಬರೋಡ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯದ ಶಾಖೆಯ ವತಿಯಿದ ಕುಡುಂಬೂರು ಶ್ರೀ ಕ್ಷೇತ್ರಕ್ಕೆ ಕುಡಿಯುವ ನೀರು ಶುದ್ಧೀಕರಣ ಯಂತ್ರ(ವಾಟರ್ ಫಿಲ್ಟರ್)ವನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡದ ಹಿರಿಯ ಶಾಖಾ ವ್ಯವಸ್ಥಾಪಕ ತರುಣ್ ಆರ್. ಶೇಟ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಕುಡುಂಬೂರು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೈವಸ್ಥಾನದ ಟ್ರಸ್ಟಿಗಳು, ಕುಡುಂಬೂರು ನಡುಗಿರಿ ಜಾರಂದಾಯ ಸಪರಿವಾರ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಬೈಕಂಪಾಡಿಯ ಕೈಗಾರಿಕಾ ಉದ್ಯಮಿಗಳು ಮತ್ತು ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article