ಶ್ರೀ ಕ್ಷೇತ್ರ ಕರ್ಕಿ ದೈವಜ್ಞ ಶ್ರೀಗಳ ಚಾತುರ್ಮಾಸ್ಯ ಆರಂಭ
Sunday, July 21, 2024
ಶಿರಸಿ: ಶ್ರೀ ಕ್ಷೇತ್ರ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳವರ ೩೯ನೇ ವರ್ಷದ ಚಾತುರ್ಮಾಸ್ಯ ಹಾಗೂ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳವರ ಪ್ರಥಮ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯು ಗುರುಪೂರ್ಣಿಮೆ ದಿನ ಜು.21 ರಂದು ಶಿರಸಿ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಆರಂಭಗೊಂಡಿತು.
ಅಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಶ್ರೀಗಳವರಿಂದ ವ್ಯಾಸಪಂಚಕ ಪೂಜೆ ಮೂಲಕ ಚಾತುರ್ಮಾಸ್ಯ ವ್ರತ ಪೂಜೆ ಆರಂಭಗೊಂಡಿತು. ನಂತರ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಶ್ರೀಗಳ ಪಾದುಕಾ ಪೂಜೆ, ಸಭಾ ಕಾರ್ಯಕ್ರಮ, ಶ್ರೀಗಳಿಂದ ಆಶೀರ್ವಚನ, ವ್ಯಾಸಕ್ಷತೆ ನಡೆಯಿತು. 12.30ಕ್ಕೆ ಶ್ರೀಗಳ ಪಟ್ಟದ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸೆ.18 ರಂದು ಚಾತುರ್ಮಾಸ್ಯದ ಸೀಮೋಲ್ಲಂಘನ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

