Mangalore: ಮನೆಯ ಹಿಂಬಾಗಿಲು ಒಡೆದು ದರೋಡೆ

Mangalore: ಮನೆಯ ಹಿಂಬಾಗಿಲು ಒಡೆದು ದರೋಡೆ

ಮಂಗಳೂರು: ನಗರದ ಬಿಜೈ ನ್ಯೂರೋಡ್ ಬಳಿಯ ಮನೆಯೊಂದರ ಹಿಂಬಾಗಿಲು ಒಡೆದು ದರೋಡೆ ಮಾಡಲಾಗಿದೆ. ಮನೆಯನ್ನು ಜಾಲಾಡಿರುವ ಕಳ್ಳರು ಕಪಾಟನ್ನು ಒಡೆದು ಅದರಲ್ಲಿದ್ದ 5 ಸಾವಿರ ರೂ. ನಗದು, ಒಂದು ಸ್ಟಿಕ್ಕರ್ ಸಿಕ್ಕಿದ್ದನ್ನು ಕದ್ದು ಪರಾರಿಯಾಗಿದ್ದಾರೆ.

ಈ ಮನೆಯಲ್ಲಿ ಶೀನ ದೇವಾಡಿಗ ಮತ್ತು ಕಸ್ತೂರಿ ಈ ಇಬ್ಬರು ವೃದ್ಧ ದಂಪತಿ ವಾಸ್ತವ್ಯ ಇದ್ದಾರೆ. ಶೀನ ದೇವಾಡಿಗರು ಡೆಂಘೀ ಜ್ವರ ಹಿನ್ನೆಲೆಯಲ್ಲಿ ಜೂ.28 ರಂದು  ಪತ್ನಿ ಸಮೇತ ಅಶೋಕನಗರದಲ್ಲಿರುವ ಪುತ್ರನ ಮನೆಗೆ ಹೋಗಿದ್ದರು. ಮನೆಯನ್ನು ಸ್ವಚ್ಛಗೊಳಿಸಲು ಭಾನುವಾರ ಪತ್ರ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಈ  ಬಗ್ಗೆ ಉರ್ವ ಪೊಲೀಸರಿಗೆ ದೂರು ನೀಡಲಾಗಿದೆ.

ಉರ್ವ ಪೊಲೀಸರು ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಜೂ.30 ರಂದು ಮನೆಯವರು  ಒಡವೆಯನ್ನು ಕೊಂಡೊಯ್ದಿದ್ದರು. ಹಾಗಾಗಿ ಹೆಚ್ಚಿನ ಸೊತ್ತು ಕಳವು ಸಾಧ್ಯವಾಗಿಲ್ಲ. ಕಪಾಟಿನಲ್ಲಿ 9 ಸಾವಿರ ರೂ. ನಗದು ಇದ್ದರೂ ಅದು ಕಳ್ಳರ ಕೈಗೆ ಸಿಕ್ಕಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article