ಕಾಂಗ್ರೆಸ್‌ನ ಹಿಂದು ದ್ವೇಷಕ್ಕೆ ಪೂರ್ಣ ವಿರಾಮವಿಲ್ಲ: ಸತೀಶ್ ಕುಂಪಲ
Friday, July 19, 2024
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮೈದಾನದಲ್ಲಿ ಧಾರ್ಮಿಕ ಆಚರಣೆಗೆ ನಿಷೇಧ ವಿಧಿಸಿರುವ ಸರ್ಕಾರದ ಕ್ರಮ ಹಿಂದುಗಳ ಹಬ್ಬಗಳನ್ನು ಗಮನದಲ್ಲಿರಿಸಿ ಮಾಡಿರುವ ನಿರ್ಧಾರ ಎನ್ನುವುದರಲ್ಲಿ ಸಂಶಯವಿಲ್ಲ ಎಂದು ದಕ್ಷಿಣ ಕನ್ನಡ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪದೇ ಪದೇ ಹಿಂದುಗಳ ಭಾವನೆಗಳಿಗೆ ದಕ್ಕೆ ತರುವಂತಹ ಘಟನೆಗಳು ನಡೆಯುತ್ತಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರದ ತುಷ್ಠೀಕರಣ ವ್ಯಾಮೋಹಕ್ಕೆ ಹಿಂದುಗಳು ಬಲಿಯಾಗುತ್ತಿದ್ದಾರೆ. ಹಿಂದು ಧರ್ಮದ ಹಬ್ಬಗಳಲ್ಲಿ ಭಾರತೀಯತೆಯ ಸಂಸ್ಕೃತಿಗಳು ಅಡಕವಾಗಿದೆ ಎನ್ನುವುದನ್ನು ಶಿಕ್ಷಣ ಇಲಾಖೆ ಅರಿಯಬೇಕು. ಸರ್ಕಾರ ತಕ್ಷಣ ಈ ಸುತ್ತೋಲೆಯನ್ನು ರದ್ದುಪಡಿಸಬೇಕೆಂದು ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.