ಸಿಎ ಪರೀಕ್ಷೆಯಲ್ಲಿ ಪ್ರಜ್ವಲ್ ಕುಮಾರ್ ಉತ್ತೀರ್ಣ
Friday, July 19, 2024
ಮಂಗಳೂರು: ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಆಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಕರಿಂಜೆಯ ಪ್ರಜ್ವಲ್ ಕುಮಾರ್ ಕೆ. ಇವರು ಉತ್ತೀರ್ಣರಾಗಿದ್ದಾರೆ.
ಪ್ರಜ್ವಲ್ ಕುಮಾರ್ ಇವರು ಬಂಟ್ವಾಳ ತಾಲೂಕಿನ ಕರಿಂಜೆ ನಿವಾಸಿಗಳಾದ ಕೆ.ಜಿ. ಯಶೋಧರ ಪೂಜಾರಿ ಹಾಗೂ ಕೆ. ಶೋಭಾ ವೈ ದಂಪತಿಗಳ ಪುತ್ರ.
ಪ್ರಜ್ವಲ್ ಕುಮಾರ್ ಮಂಗಳೂರಿನ ಸಿಎ ಪಿ. ನರೇಂದ್ರ ಪೈ ಅವರ ಮಾರ್ಗದರ್ಶನದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಗೆ ತಯಾರಿ ನಡೆಸಿದ್ದು, ಪ್ರಸ್ತುತ ಇವರಲ್ಲೇ ತರಬೇತಿ ನಡೆಸುತ್ತಿದ್ದಾರೆ.