
Mangalore: ತುಟ್ಟಿಭತ್ತೆಗಾಗಿ ಬೀಡಿ ಕಾರ್ಮಿಕರ ಪ್ರತಿಭಟನೆ
ಮಂಗಳೂರು: ಬೀಡಿ ಕಾರ್ಮಿಕರಿಗೆ ಮಾಲಕರು ಕಾನೂನು ಪ್ರಕಾರ ನೀಡಬೇಕಾದ ತುಟ್ಟಿಭತ್ತೆಯನ್ನು ನೀಡಬೇಕು ಎಂದು ಒತ್ತಾಯಿಸಿ ಸಿಐಟಿಯು ಮತ್ತು ಎಐಟಿಯುಸಿ ಸಂಘಟನೆಯ ನೇತೃತ್ವದಲ್ಲಿ ಗುರುವಾರ ನಗರದ ಕೆಪಿಟಿ ಬಳಿಯಲ್ಲಿರುವ ಮಂಗಳೂರು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಧರಣಿ ಸತ್ಯಾಗ್ರಹ ನಡೆಸಿದರು.
ಸಿಐಟಿಯು ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ವಸಂತ ಆಚಾರಿ ಮಾತನಾಡಿ 2024ರ ಎಪ್ರಿಲ್ 1ರಿಂದ ಬೀಡಿ ಕಾರ್ಮಿಕರಿಗೆ ನೀಡಬೇಕಾದ ಸಾವಿರ ಬೀಡಿಗೆ 22.72ರೂ. ನೀಡದಿರುವುದನ್ನು ವಿರೋಧಿಸಿ ಹಲವಾರು ಹಂತದ ಹೋರಾಟ ನಡೆಸಿದರೂ ಬೀಡಿ ಮಾಲಕರು ವಿತರಿಸದೆ ಕಾರ್ಮಿಕರನ್ನು ಶೋಷಿಸುತ್ತಿದ್ದಾರೆ. ಕಾರ್ಮಿಕರ ಹಿತರಕ್ಷಣೆ ಮಾಡಬೇಕಾದ ಕರ್ನಾಟಕ ಸರಕಾರವು ಮೌನವಹಿಸಿರುವುದು ಖಂಡನೀಯ ಎಂದರು.
ಎಐಟಿಯುಸಿ ಮುಖಂಡರಾದ ಶೇಖರ್, ಸೀತರಾಮ ಬೇರಿಂಜೆ, ಸುರೇಶ್, ಸಿಐಟಿಯು ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಬಿಎಂ ಭಟ್, ಪದ್ಮಾವತಿ ಶೆಟ್ಟಿ, ಸುಕುಮಾರ್ ಮಾತನಾಡಿದರು.
ಸಿಐಟಿಯು ಮುಖಂಡರಾದ ವಿಲಾಸಿನಿ, ಈಶ್ವರಿ, ನೆಬಿಸಾ, ಜಯಶ್ರೀ, ಸುಂದರ ಕುಂಪಲ, ಕೃಷ್ಣಪ್ಪ ಸಾಲಿಯಾನ್, ಜನಾರ್ದನ ಕುತ್ತಾರ್, ಭಾರತಿ ಬೋಳಾರ, ಜಯಲಕ್ಷ್ಮಿ, ಸದಾಶಿವ ದಾಸ್ ಲೋಲಾಕ್ಷಿ, ಬಾಬು ಪಿಲಾರ್, ಎಐಟಿಯುಸಿ ಮುಖಂಡರಾದ ಕರುಣಾಕರ, ವಿ.ಕುಕ್ಯಾನ್, ಸುಲೋಚನಿ ಮತ್ತಿತರರು ಪಾಲ್ಗೊಂಡಿದ್ದರು.
ಸಿಐಟಿಯು ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಸಮಾರೋಪ ಭಾಷಣ ನಡೆಸಿದರು. ಯು.ಜಯಂತ ನಾಯಕ್ ಸ್ವಾಗತಿಸಿ, ವಂದಿಸಿದರು.