Mangalore: ವಾಲ್ಮೀಕಿ ನಿಗಮದಲ್ಲಿ ಹಗರಣ-ಸಚಿವ ನಾಗೇಂದ್ರ ಅವರನ್ನು ಬಲಿಪಶು ಮಾಡಲಾಗಿದೆ: ಪ್ರತಾಪ್‌ಸಿಂಹ ನಾಯಕ್

Mangalore: ವಾಲ್ಮೀಕಿ ನಿಗಮದಲ್ಲಿ ಹಗರಣ-ಸಚಿವ ನಾಗೇಂದ್ರ ಅವರನ್ನು ಬಲಿಪಶು ಮಾಡಲಾಗಿದೆ: ಪ್ರತಾಪ್‌ಸಿಂಹ ನಾಯಕ್


ಮಂಗಳೂರು: ವಾಲ್ಮೀಕಿ ನಿಗಮದಲ್ಲಿ ಕೋಟಿ ರೂ. ಮೊತ್ತ ಲೂಟಿಗೆ ಸಂಬಂಧಿಸಿ ಸಚಿವ ನಾಗೇಂದ್ರ ಅವರನ್ನು ಬಲಿಪಶು ಮಾಡಲಾಗಿದೆ. ಈ ಅವ್ಯವಹಾರದ ಹೊಣೆಯನ್ನು ಮುಖ್ಯಮಂತ್ರಿ ಹೊರಬೇಕು. ಅಲ್ಲದೆ ಮೈಸೂರಿನ ಮೂಡಾದಲ್ಲಿ ಮುಖ್ಯಮಂತ್ರಿ ಪತ್ನಿಗೆ ಅಕ್ರಮ ಸೈಟ್ ವಿತರಿಸಲಾಗಿದ್ದು, ಅದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಅದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಯೂನಿಯನ್ ಬ್ಯಾಂಕ್‌ನ ದೂರಿನ ಮೇರೆಗೆ ಇಡಿ ಅಧಿಕಾರಿಗಳ ತಂಡ ಆಗಮಿಸಿದೆಯೇ ವಿನಃ ಕೇಂದ್ರ ಸರ್ಕಾರ ಕಳುಹಿಸಿದ್ದಲ್ಲ. ಆದರೆ ಇದನ್ನೇ ಪ್ರಶ್ನಿಸುತ್ತಿರುವುದು ಕಾಂಗ್ರೆಸ್‌ನ ನೈತಿಕ ಅಧಃಪತನವನ್ನು ತೋರಿಸುತ್ತದೆ. ಸಮಾಜವಾದ ಹಾಗೂ ಭ್ರಷ್ಟಾಚಾರ ವಿರುದ್ಧ ಮಾತನಾಡುವ ಮುಖ್ಯಮಂತ್ರಿಗಳು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.

ಮೂಡಾ ನಿಯಮದಂತೆ ಮೂರು ಎಕರೆ ವಶಪಡಿಸುವುದಿದ್ದರೆ ಜಾಗದ ಮಾಲೀಕರಿಗೆ ಎರಡು ಸೈಟ್ ನೀಡಬಹುದು. ಆದರೆ ಇಲ್ಲಿ 14 ಸೈಟ್ ನೀಡಲಾಗಿದೆ. ಸಮಾಜವಾದಿ, ಬಡತನದ ಬಗ್ಗೆ ಮಾತನಾಡುವ ಸಿಎಂ, ತನ್ನ ಪತ್ನಿಗೆ 14 ಸೈಟ್ ನೀಡಿದ ಬಗ್ಗೆ ಜನತೆಗೆ ಸೂಕ್ತ ಉತ್ತರ ನೀಡಬೇಕು ಎಂದರು.

ಪ್ರಸಕ್ತ ಬೆಂಗಳೂರಿನ ವಿಧಾನಸೌಧದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಜು.12ರಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಮತ್ತಿತರ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜು.15ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲೂ ಈ ಪ್ರಕರಣ ತಾರ್ಕಿಕ ಅಂತ್ಯವಾಗುವ ವರೆಗೆ ಹೋರಾಟ ಮುಂದುವರಿಯಲಿದೆ ಎಂದರು. ಶಾಸಕ ಡಾ.ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿಯಂತೆ ಅಸಂವಿಧಾನಿಕವಾಗಿ ಹೇಳಿಕೆ ನೀಡಿಲ್ಲ. ರಾಹುಲ್ ಗಾಂಧಿ ಅವರು ಹಿಂದುಗಳು ಹಿಂಸಕರು ಎನ್ನುವ ಮೂಲಕ ತೀರ ಕೀಳು ಮಟ್ಟದ ಹೇಳಿಕೆ

ನೀಡಿದ್ದಾರೆ. ಆದರೆ ಡಾ.ಭರತ್ ಶೆಟ್ಟಿ ಅವರು ರಾಹುಲ್‌ರಂತೆ ಯಾವುದೇ ಕೀಳು ಹೇಳಿಕೆ ನೀಡಿಲ್ಲ. ಡಾ.ಭರತ್ ಶೆಟ್ಟಿ ವಿರುದ್ಧ ಅಧಿಕಾರಿಗಳ ಮೇಲೆ ಒತ್ತಡ ಕಾರಣ ಕೇಸು ದಾಖಲಿಸಿರುವುದು ಖಂಡನೀಯ ಎಂದರು.

ಮುಖಂಡರಾದ ರಮೇಶ್ ಕಂಡೆಟ್ಟು, ಪೂಜಾ ಪೈ, ಪೂರ್ಣಿಮಾ, ಸಂಜಯ ಪ್ರಭು, ವಸಂತ ಪೂಜಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article