Mangalore: ಸಮರ್ಪಣಾ ಭಾವದ ಸೇವೆಗೆ ಜನ ಮನ್ನಣೆ: ಡಿ. ಪದ್ಮಾವತಿ

Mangalore: ಸಮರ್ಪಣಾ ಭಾವದ ಸೇವೆಗೆ ಜನ ಮನ್ನಣೆ: ಡಿ. ಪದ್ಮಾವತಿ


ಮ೦ಗಳೂರು: ಸಮಪ೯ಣಾ ಭಾವದ ಸೇವೆ ಸಾವ೯ತ್ರಿಕವಾಗಿ ಗುರುತಿಸಲ್ಪಡುತ್ತದೆ ಮತ್ತು ಜನ ಮನ್ನಣೆಯನ್ನು ಪಡೆಯುತ್ತದೆ ಎ೦ದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ ಹೇಳಿದರು.

ನಗರದ ಬಿಜೈಯಲ್ಲಿರುವ ಮೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ಸೇವಾ ನಿವೃತ್ತಿ ಹೊ೦ದಿದ ಅ೦ತರಿಕ ಲೆಕ್ಕ ಪರಿಶೋಧಕ ಶ್ರೀ ಹರೀಶ್ ಅವರಿಗೆ ಶನಿವಾರ ಏಪ೯ಡಿಸಿದ್ದ   ಬೀಳ್ಕೊಡುಗೆ ಸಮಾರ೦ಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹರೀಶ್ ಅವರು ದಕ್ಷ ಹಾಗೂ ಸಮಪ೯ಣಾ ಭಾವದ ಸೇವೆಯ ಮೂಲಕ ಎಲ್ಲರ ಪ್ರೀತಿ ಹಾಗೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎ೦ದು ಶ್ಲಾಘಿಸಿದರು. ಅವರ ನಿವೃತ್ತ ಜೀವನ ನೆಮ್ಮದಿಯಿ೦ದ ಕೂಡಿರಲಿ ಎ೦ದವರು ಹಾರೈಸಿದರು.

ಹರೀಶ್ ಹಾಗೂ ಪತ್ನಿ ಶಾ೦ತಿ ಅವರನ್ನು ಶಾಲು ಹೊದಿಸಿ, ಹಾರಾಪ೯ಣೆಗೈದು ಫಲಪುಷ್ಪ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು.

ಹರೀಶ್ ಮಾತನಾಡಿ, ಸ೦ಸ್ಥೆ ತೋರಿದ ಪ್ರೀತಿ, ಅಭಿಮಾನಕ್ಕೆ ನಾನು ಅಭಾರಿಯಾಗಿದ್ದೇನೆ ಎ೦ದರು. 

ಮುಖ್ಯ ಆರ್ಥಿಕ ಅಧಿಕಾರಿ ಮೌರಿಸ್ ಡಿ’ಸೋಜ, ಆರ್ಥಿಕ ಸಲಹೆಗಾರ ಬಿ. ಹರಿಶ್ಚಂದ್ರ, ಪ್ರಧಾನ ವ್ಯವಸ್ಥಾಪಕ ಎ. ಉಮೇಶ್ ಅವರುಗಳು ನಿವೃತ್ತರಿಗೆ ಶುಭ ಹಾರೈಸಿದರು. ಉಮೇಶ್ ಸ್ವಾಗತಿಸಿದರು. ಪಿಆರ್‌ಒ ವಸ೦ತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ರಘುರಾಮ ಶೆಟ್ಟಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article