Udupi: ಬಾಲಕಿಯ ಅಪಹರಣ-ಪ್ರಕರಣ ದಾಖಲು

Udupi: ಬಾಲಕಿಯ ಅಪಹರಣ-ಪ್ರಕರಣ ದಾಖಲು

ಉಡುಪಿ: ಬಾಲಕಿಯೊಬ್ಬಳನ್ನು ಅಪಹರಿಸಿರುವ ಬಗ್ಗೆ ತಾಯಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಹರಣಕ್ಕೆ ಒಳಗಾದ ಬಾಲಕಿಯನ್ನು ಉಡುಪಿ ಬೈಲೂರಿನ ಆಶಾಲತಾ ಎಂಬವರ ಮಗಳು ದೀಕ್ಷಾ ಎಂದು ಗುರುತಿಸಲಾಗಿದೆ.

ಜು. 11ರಂದು ಮಧ್ಯಾಹ್ನ ಮನೆಯಲ್ಲಿದ್ದ ದೀಕ್ಷಾ ಬಳಿಕ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯನ್ನು ಶಾಲೆಗೆ ಬಿಡುತ್ತಿದ್ದ ರಿಕ್ಷಾ ಚಾಲಕನಲ್ಲಿ ವಿಚಾರಿಸಿದರೂ ಪತ್ತೆಯಾಗಿರಲಿಲ್ಲ. ಆಕೆಯನ್ನು ಯಾರೋ ದುರುದ್ದೇಶದಿಂದ ಅಪಹರಣ ಮಾಡಿರುವ ಸಂದೇಹ ಇದೆ ಎಂದು ಆಶಾಲತಾ ದೂರಿನಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article