Bantwal: ನೇತ್ರಾವತಿಯಲ್ಲಿ ಹರಿಯುತ್ತಿರುವ 3.0 ಮೀ.ನಲ್ಲಿ ನೀರು

Bantwal: ನೇತ್ರಾವತಿಯಲ್ಲಿ ಹರಿಯುತ್ತಿರುವ 3.0 ಮೀ.ನಲ್ಲಿ ನೀರು


ಬಂಟ್ವಾಳ: ಶನಿವಾರ ರಾತ್ರಿಯಿಂದ ಭಾನುವಾರ ಇಡೀದಿನ ಸುರಿದ ಮಳೆಯಿಂದ ನೇತ್ರಾವತಿಯಲ್ಲಿ ನೀರಿನ ಮಟ್ಟದಲ್ಲಿ ಸಂಜೆಯ ವೇಳೆಗೆ ಕೇವಲ 3.0 ಮೀ.ಅಡಿ ಎತ್ತರದಲ್ಲಿ ಹರಿಯುತಿತ್ತು.

ಬೆಳಗ್ಗಿನ ಹೊತ್ತು 3.1 ಮೀ.ಅಡಿ ಎತ್ತರದಲ್ಲಿ ಹರಿಯುತ್ತಿದ್ದ ನೀರು ಸಂಜೆಯಾದಾಗ 3.0 ಮೀ.ಗೆ ಇಳಿಕೆಯಾಗಿತ್ತು.

ಎಡೆಬಿಡದೆ ಮಳೆ ಸುರಿದಿದ್ದರೂ ಬಂಟ್ವಾಳದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ,ತುಂಬೆ ಡ್ಯಾಮ್‌ನ ಎಲ್ಲಾ ಗೇಟ್‌ಗಳನ್ನು ತೆರವು ಮಾಡಿದ ಪರಿಣಾಮ ನೀರು ಸರಾಗವಾಗಿ ಹರಿದು ಸಮುದ್ರ ಸೇರುತ್ತಿದೆ. ಅಧಿಕಾರಿಗಳು ನದಿ ತೀರಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಗಾಳಿ, ಮಳೆಯಿಂದಾಗಿ ತಾಲೂಕಿನಲ್ಲಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article