Ullal: ಭಾರತ್ ಶೆಟ್ಟಿ ಡಾ. ಪದ ಬಳಕೆ ತೆಗೆಯಲಿ: ಮಮತಾ ಗಟ್ಟಿ

Ullal: ಭಾರತ್ ಶೆಟ್ಟಿ ಡಾ. ಪದ ಬಳಕೆ ತೆಗೆಯಲಿ: ಮಮತಾ ಗಟ್ಟಿ


ಉಳ್ಳಾಲ: ಕೇಂದ್ರ ದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಜನವಿರೋಧಿ, ಶೈಕ್ಷಣಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂಬುದಕ್ಕೆ ಕೆಲವು ಘಟನೆಗಳು ಸಾಕ್ಷಿಯಾಗಿವೆ. ಕೇಂದ್ರೀಯ ಪರೀಕ್ಷಾ ಮಂಡಳಿ ನಡೆಸಿದ ನೀಟ್ ಪರೀಕ್ಷೆಯಲ್ಲಿ ಆಗಿರುವ ಅವ್ಯವಹಾರದಿಂದ ಬಹಳಷ್ಟು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ ಎಂದು ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ ಆರೋಪಿಸಿದರು.

ಅವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟುವಿನಲ್ಲಿ ಶುಕ್ರವಾರ ನಡೆದ ಭಾರತ್ ಅಕ್ಕಿ, ನೀಟ್ ಪರೀಕ್ಷೆ  ಮತ್ತು ಶಾಸಕ ಭರತ್ ಶೆಟ್ಟಿ ಹೇಳಿಕೆ ವಿರೋಧಿಸಿ ನಡೆದ  ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು 

ಕೇಂದ್ರ ಸರ್ಕಾರ ದೊಡ್ಡ ಯೋಜನೆ ಆಗಿ ಜಾರಿಗೆ ತಂದಿದ್ದ ಕೆ.ಜಿ.ಗೆ 29 ರೂವಿಗೆ ನೀಡುತ್ತಿದ್ದ ಭಾರತ್ ಅಕ್ಕಿ ಯನ್ನು ಸದ್ದಿಲ್ಲದೆ ಬಂದ್ ಮಾಡದೆ.ಚುನಾವಣಾ ಸಂದರ್ಭದಲ್ಲಿ ಅಕ್ಕಿ ಯನ್ನೇ ಅಸ್ತ್ರ ವನ್ನಾಗಿ ಬಳಸಿ ಪ್ರಚಾರ ಗಿಟ್ಟಿಸಿಕೊಂಡ ಬಿಜೆಪಿ ಈಗ ಅಕ್ಕಿ ಸರಬರಾಜು ನಿಲ್ಲಿಸಿ ಅನ್ಯಾಯ ಎಸಗಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮೋದಿಯ ಆಡಳಿತ ಬಗೆ ಪ್ರಶ್ನೆ ಮಾಡಿದ ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಏಕವಚನದಲ್ಲಿ ನಿಂದಿಸಿ ಕೆನ್ನೆಗೆ ಭಾವಿಸುತ್ತೇನೆ ಎಂದ ಶಾಸಕ ಭರತ್ ಶೆಟ್ಟಿ ಗೆ  ಶಾಸಕರಾಗಿರಲು ಅವಕಾಶ ಇಲ್ಲ.  ಈ ವಿವಾದಾತ್ಮಕ ಹೇಳಿಕೆ  ಅವರ ಸ್ಥಾನಕ್ಕೆ ಯೋಗ್ಯ ಎನಿಸುವುದಿಲ್ಲ.ಅವರು ಮೊದಲು ಡಾ.ಎಂಬ ಪದ ಬಳಕೆ ಮಾಡುವುದನ್ನು ತೆಗೆಯಬೇಕು. ಇಲ್ಲದಿದ್ದಲಿ  ಆಗಿ ಪದವಿ ಪಡೆದವರ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಮುಸ್ತಫಾ ಹರೇಕಳ ಮಾತನಾಡಿ, ಸರ್ಕಾರದ ಧೋರಣೆಯಿಂದ ತೊಂದರೆಗೋಳಗಾದಾ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲಿ ಎಂದು ಒತ್ತಾಯಿಸಿದ ಅವರು,ಡಾ.ಭರತ್ ಶೆಟ್ಟಿ ವಿವಾದಾತ್ಮಕ ರೀತಿಯಲ್ಲಿ ರಾಹುಲ್ ಗಾಂಧಿಯನ್ನು ಟೀಕೆ ಮಾಡುವ ಮೂಲಕ ಅವರು ಶಾಸಕ ಸ್ಥಾನಕ್ಕೆ ಯೋಗ್ಯರಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಮಾತನಾಡಿ, ಕೇಂದ್ರ ಸರ್ಕಾರ ಶ್ರೀಮಂತರಿಗೆ ಮಾತ್ರ ಸರ್ಕಾರ  ಇದ್ದಂತಿದೆ. ಬಡವರ  ಶಿಕ್ಷಣಕ್ಕೆ ಅಡ್ಡಿ ಪಡಿಸಿ ಆಡಳಿತ ನಡೆಸುವುದು ಜನವಿರೋಧಿ ನೀತಿ ಧೋರಣೆ ಆಗಿದೆ. ಅಲ್ಲದೇ 29 ರೂ.ಗೆ ಅಕ್ಕಿ ಕೊಡುತ್ತೇವೆ ಎಂದು ಡಂಗುರ ಸಾರಿ ನೀಡುತ್ತಿದ್ದ ಭಾರತ್ ಅಕ್ಕಿ ಬಂದ್ ಮಾಡಿ ಮೌನ ಆಗಿರುವುದು ಸಮಾಜಕ್ಕೆ, ಬಡವರಿಗೆ ಮಾಡಿದ ಅನ್ಯಾಯ ಆಗಿದೆ ಎಂದು ದೂರಿದರು.

ಮುಖಂಡರಾದ ಟಿ.ಕೆ. ಸುಧೀರ್, ಫಿರೋಜ್ ಮಲಾರ್, ದಿನೇಶ್ ಕುಂಪಲ, ಚಂದ್ರಿಕಾ ರೈ, ಆಳ್ವಿನ್ ಡಿಸೋಜ, ಅಶ್ರಫ್ ಕೆಸಿರೋಡ್ ಮಾತನಾಡಿದರು.

ಮನ್ಸೂರ್, ಸೌಕತ್ ಕೊಣಾಜೆ , ಸುರೇಖಾ ಚಂದ್ರ ಹಾಸ್, ರಹ್ಮಾನ್ ಕೊಣಾಜೆ,  ಹಮೀದ್ ಕಿನ್ಯ, ಸಾದಿಕ್ ಕಲ್ಲಾಪು,ರೋಹಿತ್ ಉಳ್ಳಾಲ, ಮೊಹಮ್ಮದ್ ಮುಕಚೇರಿ, ಫಾರೂಕ್ ಕಿನ್ಯ, ಅಹ್ಮದ್ ಅಜ್ಜಿನಡ್ಕ ಪೀಯೂಸ್ ಮೊಂತೆರೊ, ಸಪ್ನಾ ಹರೀಶ್, ರಝಿಯ ಇಬ್ರಾಹಿಂ ಮೊದಲಾದವರಿದ್ದರು.

ರಹಿಮಾನ್ ಕೋಡಿಜಾಲ್ ಸ್ವಾಗತಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article