
Udupi: ಬೈಕ್ ತೆಗೆಯುವ ಮುನ್ನ ಇರಲಿ ಎಚ್ಚರ-ಬೈಕ್ ಡೂಮ್‌ನಲ್ಲಿ ಹೆಬ್ಬಾವು!
Wednesday, July 3, 2024
ಉಡುಪಿ: ಬೈಕ್ ತೆಗೆಯುವ ಮುನ್ನ ಸವಾರರು ಎಚ್ಚರ ವಹಿಸಬೇಕಿರುವುದು ಅಗತ್ಯ. ಬೈಕ್ ಡೂಮ್‌ನಲ್ಲಿ ಹೆಬ್ಬಾವನ್ನು ಕಂಡು ಸವಾರ ಬೆಚ್ಚಿಬಿದ್ದ ಘಟನೆ ಉಡುಪಿ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಮಣಿಪಾಲದ ರಾಹುಲ್ ಎಂಬವರು ಕಿನ್ನಿಮೂಲ್ಕಿ ಪೆಟ್ರೋಲ್ ಬಂಕ್ ಬಳಿ ಬೈಕ್ ನಿಲ್ಲಿಸಿ ಡ್ರೈವಿಂಗ್ ಕೆಲಸಕ್ಕೆ ಹೋಗಿದ್ದರು. ರಾತ್ರಿ 8.30ರ ಸುಮಾರಿಗೆ ಕೆಲಸ ಮುಗಿಸಿ ವಾಪಾಸು ಬಂದು ಬೈಕ್‌ನಲ್ಲಿ ಹೊರಟಾಗ ಜೋಡುಕಟ್ಟೆ ಬಳಿ ಬೈಕ್ ಡೂಮ್‌ನಲ್ಲಿ ಮಲಗಿದ್ದ ಹಾವು ಕಂಡು ಬೆಚ್ಚಿಬಿದ್ದರು.
ಕೂಡಲೇ ಬೈಕ್ ನಿಲ್ಲಿಸಿದ ಅವರು, ಅರಣ್ಯ ಇಲಾಖೆ ಮೂಲಕ ಪ್ರಾಣೇಶ್ ಪರ್ಕಳ ಎಂಬವರಿಗೆ ಕರೆ ಮಾಡಿ ಹಾವು ಇರುವ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಪ್ರಾಣೇಶ್ ಪರಿಶೀಲಿಸಿದಾಗ ಅದು ಹೆಬ್ಬಾವಿನ ಮರಿ ಎಂಬುದು ಖಚಿತವಾಯಿತು.
ಬಳಿಕ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಡಲಾಯಿತು.