Ullal: ಉಳ್ಳಾಲ ಖಾಝಿಯಾಗಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್
Sunday, July 21, 2024
ಉಳ್ಳಾಲ: ಉಳ್ಳಾಲ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಖಾಝಿ ಆಯ್ಕೆಗೆ ಸಂಬಂಧಿಸಿ ಉಳ್ಳಾಲ ದರ್ಗಾ ವಠಾರದ ಮದನಿ ಹಾಲಿನಲ್ಲಿ ಭಾನುವಾರ ಮಧ್ಯಾಹ್ನ ನಡೆದ ಮಹಾಸಭೆಯಲ್ಲಿ ಎ.ಪಿ. ಉಸ್ತಾದ್ ಅವರನ್ನು ಖಾಝಿಯಾಗಿ ನೇಮಕ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಆ.5 ರಂದು ಅಧಿಕಾರ ಸ್ವೀಕಾರ ನಡೆಯಲಿದೆ ಎಂದು ದರ್ಗಾ ಅಧ್ಯಕ್ಷರಾದ ಬಿ.ಜಿ. ಹನೀಫ್ ಹಾಜಿ ಮತ್ತು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.