ವೇದಿಕೆಯ ಆಸನದಲ್ಲಿ ಶಿಷ್ಟಾಚಾರ ಪ್ರಶ್ನೆ!: ಜಿಲ್ಲಾಧಿಕಾರಿ ವಿರುದ್ಧ ಗರಂ ಆದ ಭೋಜೇಗೌಡ

ವೇದಿಕೆಯ ಆಸನದಲ್ಲಿ ಶಿಷ್ಟಾಚಾರ ಪ್ರಶ್ನೆ!: ಜಿಲ್ಲಾಧಿಕಾರಿ ವಿರುದ್ಧ ಗರಂ ಆದ ಭೋಜೇಗೌಡ


ಮಂಗಳೂರು: ಕೆಡಿಪಿ ತ್ರೈಮಾಸಿಕ ಸಭೆಯ ವೇದಿಕೆಯ ಆಸನ ವ್ಯವಸ್ಥೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಸ್.ಎಲ್. ಭೋಜೇಗೌಡರು ಜಿಲ್ಲಾಧಿಕಾರಿ ವಿರುದ್ಧ ಗರಂ ಆದ ಪ್ರಸಂಗ ನಡೆಯಿತು.

ಸಚಿವರು, ಡಿಸಿ, ಜಿ.ಪಂ. ಸಿಇಒ ಹೊರತುಪಡಿಸಿ ಡಿಸಿಎಫ್‌, ಮೆಸ್ಕಾಂ ಎಂಡಿ, ಪೊಲೀಸ್‌ ಕಮಿಷನರ್‌, ಎಸ್ಪಿ ಅವರನ್ನು ಕೂರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭೋಜೇಗೌಡರು, ಯಾವ ಶಿಷ್ಟಾಚಾರದಲ್ಲಿ ಇವರನ್ನೆಲ್ಲ ವೇದಿಕೆಯಲ್ಲಿ ಕೂರಿಸಿದ್ದೀರಿ? ಡಿಸಿಗೆ ಶಿಷ್ಟಾಚಾರ ಬಗ್ಗೆ ಮಾಹಿತಿ ಇದೆಯಾ ಎಂದು ತರಾಟೆಗೆ ತೆಗೆದುಕೊಂಡರು. ಪದ್ಧತಿ ಪ್ರಕಾರವೇ ಅವರನ್ನು ಕೂರಿಸಲಾಗಿದೆ ಎಂದು ಡಿಸಿ ಸಮಜಾಯಿಸಿ ನೀಡಿದರೂ ತೃಪ್ತರಾಗದ ಭೋಜೇಗೌಡರನ್ನು ಸಮಾಧಾನಿಸಲು ಯತ್ನಸಿದ ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾಗೂ ಕ್ಲಾಸ್‌ ತೆಗೆದುಕೊಂಡರು. ಬಳಿಕ ಸಚಿವ ದಿನೇಶ್ ಗುಂಡೂರಾವ್‌ ಅವರು ಮುಂದೆ ಈ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿ ಸಭೆ ಮುಂದುವರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article