ಶ್ರಾವಣ ಸಂಜೆಯಲ್ಲಿ  'ಆನ ಪಾನ ಸತ್ ಧ್ಯಾನ'

ಶ್ರಾವಣ ಸಂಜೆಯಲ್ಲಿ 'ಆನ ಪಾನ ಸತ್ ಧ್ಯಾನ'


ಮೂಡುಬಿದಿರೆ: ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ವತಿಯಿಂದ ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ  'ಶ್ರಾವಣ ಸಂಧ್ಯಾ' ಕಾರ್ಯಕ್ರಮ  ನಡೆಯಿತು.

ಸಮಿತಿ ಆಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್. ಜಯಕರ ಪುರೋಹಿತರು ಉದ್ಘಾಟಿಸಿ ಮಾತನಾಡಿ, `ಹಬ್ಬಗಳ ಅಚರಣೆ ಆರಂಭವಾಗುವ ಶ್ರಾವಣ ಮಾಸ ಆತ್ಯಂತ ಪವಿತ್ರ;  ಹಬ್ಬಗಳ ಸಹಿತ ಎಲ್ಲ ಆಚರಣೆ, ಸಂಸ್ಕೃತಿ ವಿಚಾರ ಕುರಿತು ಮಕ್ಕಳಿಗೆ ತಿಳಿಯಪಡಿಸುವ ಹೊಣೆ ಹಿರಿಯರದ್ದಾಗಿದೆ ಎಂದರು.

ಧ್ಯಾನ,ಪಿರಮಿಡ್ ಹೀಲಿಂಗ್ ಗುರು ಭಾರತಿ ಶೆಟ್ಟಿ ಸಂಪಿಗೆ ಇವರು `ಆರೋಗ್ಯಮಯ ಜೀವನಕ್ಕಾಗಿ ಆನ ಪಾನ ಮತ್ತು ಸತ್‌ಧ್ಯಾನ' ಕುರಿತು ಪ್ರಾಯೋಗಿಕ ಕಾರ್ಯಾಗಾರ ನಡೆಸಿಕೊಟ್ಟರು.  

ಮಾನಸಿಕ ಹಾಗೂ ದೈಹಿಕ ಒತ್ತಡಗಳ ಪರಿಣಾಮದಿಂದ ಉಂಟಾಗುವ ಮಾನಸಿಕ, ದೈಹಿಕ ಕಾಯಿಲೆಗಳಿಗೆ ಧ್ಯಾನದ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು  ತಿಳಿಸಿ ಕೊಟ್ಟರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕುಮುದಾ ಹಾಗೂ ರೂಪ ಇವರು ತಮಗೆ ಆದ ಅನುಭವಗಳನ್ನು ಹಂಚಿಕೊಂಡರು. ದೇವಾಲಯದ ಗೋಪುರಗಳ ಆಕೃತಿ ಪಿರಮಿಡ್ ರೂಪದಲ್ಲಿದ್ದು ಅದರಿಂದ ಉಂಟಾಗುವ ಸಕಾರಾತ್ಮಕ ಗುಣಗಳ ಬಗ್ಗೆ ವಿವರಣೆ ನೀಡಿದರು  ಸ್ವತಃ ಕ್ಷೇತ್ರದ ಆಡಳಿತ ಮೊಕ್ತೇಸರರು ಪಿರಮಿಡ್ ಕ್ಯಾಪ್ ಧರಿಸಿ ಧ್ಯಾನಸ್ಥರಾಗಿ  ಅವರಿಗೆ ಆದ ಅನುಭವ ಹಂಚಿಕೊಂಡರು.

ದೇವಸ್ಥಾನದ ಮೊಕ್ತೇಸರರಾದ ಎಂ.ಕೆ. ಬಾಲಕೃಷ್ಣ ಆಚಾರ್ಯ, ಉಳಿಯ ಶಿವರಾಮ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿ ಉಪಾಧ್ಯಕ್ಷ ಭಾಸ್ಕರ ಆಚಾರ್ಯ ಹೊಸಬೆಟ್ಟು  ಅತಿಥಿಗಳಾಗಿದ್ದರು. ನಾಲ್ವರು ಪ್ರತಿಭಾನ್ವಿತ ಬಡ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಶಾಂತಲಾ ಸೀತಾರಾಮ ಆಚಾರ್ಯ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ದೀಪಾ ರಾಜೇಶ್ ಆಚಾರ್ಯ ಅತಿಥಿ ಪರಿಚಯ ನೀಡಿದರು. ಸಮಿತಿ ಕೋಶಾಧಿಕಾರಿ ವಿದ್ಯಾಶ್ರೀ ಸುರೇಶ ಆಚಾರ್ಯ ವಿದ್ಯಾರ್ಥಿ ವೇತನ ಫಲಾನುಭವಿಗಳು, ದಾನಿಗಳ ವಿವರ ವಾಚಿಸಿದರು. ಕಾರ್ಯದರ್ಶಿ ರಶ್ಮಿತಾ ಅರವಿಂದ ಆಚಾರ್ಯ ನಿರೂಪಿಸಿ ಅನುಷಾ ಪ್ರಜ್ವಲ್ ವಂದಿಸಿದರು. ಮಳೆಗಾಲದ ಪ್ರಾಕೃತಿಕ ತಿಂಡಿ ತಿನಿಸುಗಳನ್ನು ತಯಾರಿಸಿ, ಉಣಬಡಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article