ಮೇಜರ್ ಧ್ಯಾನ್ ಚಂದ್‌ರವರ ಸಾಧನೆಯ ಬದುಕು ಎಲ್ಲರಿಗೂ ಮಾದರಿ: ಡಾ. ಕೇಶವ ಮೂರ್ತಿ ಟಿ.
Thursday, August 29, 2024
ಮಂಗಳೂರು: ಮೇಜರ್ ಧ್ಯಾನ್ ಚಂದ್ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿ ಪಟು ಅವರ ಸಾಧನೆ ಇತರರಿಗೂ ಮಾದರಿ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೇಶವ ಮೂರ್ತಿ ಟಿ. ಹೇಳಿದರು.
ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ.ಸತೀಶ್ ಪೈ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಐ.ಕ್ಯೂ.ಎ.ಸಿಯ ವತಿಯಿಂದ ಆ.29 ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮೇಜರ್ ಧ್ಯಾನ್ ಚಂದ್‌ನಂತಹ ಶ್ರೇಷ್ಠ ಹಾಕಿ ಪಟುವಿಗೆ ಚಾಂದ್ ಬಿರುದು ಬಂದ ಹಿನ್ನಲೆ, ಅವರ ಕ್ರೀಡಾ ಸಾಧನೆಗಳ ಬಗ್ಗೆ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ. ಅವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲಕರಾದ ಡಾ. ಸುಧಾಕರನ್ ಟಿ., ಸಂಚಾಲಕರಾದ ದೇವಿ ಪ್ರಸಾದ್, ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ರಘುಪತಿ ಉಪಸ್ಥಿತರಿದ್ದರು. ಕ್ರೀಡಾ ವಿಭಾಗದ ಮುಖ್ಯಸ್ಥರು ಹಾಗೂ ಸಂಯೋಜಕರಾದ ಶುಭ ಕೆ.ಹೆಚ್. ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಅಪರ್ಣ ಆಳ್ವ ವಂದಿಸಿದರು.
