ಅಂತಾರಾಷ್ಟ್ರೀಯ ತ್ರೋಬಾಲ್ ಪಂದ್ಯಾಕೂಟಕ್ಕೆ ಸೂಡ ನಿಧಿ ಪ್ರಭು ಆಯ್ಕೆ
Thursday, August 29, 2024
ಶಿರ್ವ: ಅಂತಾರಾಷ್ಟ್ರೀಯ ಮಟ್ಟದ ‘ಏಷ್ಯಾನ್ ತ್ರೋಬಾಲ್ ಚಾಂಪಿಯನ್ ಶಿಫ್-2024’ಗೆ ಆದರ್ಶ್ ಇನ್ಸ್ಟಿಟ್ಯೂಟ್ ಆಫ್ ಆಲೈಡ್ ಹೆಲ್ತ್ ಸೈನ್ಸಸ್ ಉಡುಪಿ ಇಲ್ಲಿನ ವಿದ್ಯಾರ್ಥಿನಿ ಶಿರ್ವ ಸಮೀಪದ ಸೂಡಾ ನಿವಾಸಿ ನಿಧಿ ಪ್ರಭು ಆಯ್ಕೆಯಾಗಿದ್ದಾರೆ.
ಇವರು ಅಮೆಚೂರ್ ತ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಪಂದ್ಯಾಟವು ಸೆಪ್ಟಂಬರ್ 16 ರಿಂದ 18ರ ವರೆಗೆ ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಜರುಗಲಿದೆ.
ನಿಧಿ ಪ್ರಭು ಇವರು ಸೂಡಾ ನರಸಿಂಹ ಪ್ರಭು, ಸುನೀತಾ ಪ್ರಭು ದಂಪತಿಗಳ ಪುತ್ರಿ.