ವಾಲ್ಪಾಡಿ ಗ್ರಾಮಸಭೆ-ಮಳೆಗಾಲದಲ್ಲಿ ಮೆಸ್ಕಾಂಗೆ ಸಹಕಾರದ ನೀಡದ ಅರಣ್ಯ ಇಲಾಖೆ: ನೋವನ್ನು ಹಂಚಿಕೊಂಡ ಮೆಸ್ಕಾಂ ಅಧಿಕಾರಿ

ವಾಲ್ಪಾಡಿ ಗ್ರಾಮಸಭೆ-ಮಳೆಗಾಲದಲ್ಲಿ ಮೆಸ್ಕಾಂಗೆ ಸಹಕಾರದ ನೀಡದ ಅರಣ್ಯ ಇಲಾಖೆ: ನೋವನ್ನು ಹಂಚಿಕೊಂಡ ಮೆಸ್ಕಾಂ ಅಧಿಕಾರಿ


ಮೂಡುಬಿದಿರೆ: ಈ ಬಾರಿಯ ಮಳೆಗಾಲದಲ್ಲಿ ಸುಮಾರು 120ರಷ್ಟು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮೆಸ್ಕಾಂ ಇಲಾಖೆಯು ಮೊದಲೇ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ

ಅರ್ಜಿಯನ್ನು ನೀಡಿತ್ತು ಆದರೆ  ಅರಣ್ಯ ಇಲಾಖೆಯವರು ತೆರವು ಮಾಡಲು ಸ್ಪಂದನೆ ನೀಡದಿರುವುದರಿಂದ ಇರುವುದರಿಂದ  ಇಷ್ಟೊಂದು ಪ್ರಮಾಣದಲ್ಲಿ  ಕಂಬಗಳು ಉರುಳಿ ಬೀಳಲು ಕಾರಣವಾಗಿದೆ ಎಂದು ಮೆಸ್ಕಾಂ ಬೆಳುವಾಯಿಯ ಶಾಖಾಧಿಕಾರಿ ಗೇಮಾ ನಾಯ್ಕ್ ಗ್ರಾಮ ಸಭೆಯಲ್ಲಿ ನೋವನ್ನು ಹಂಚಿಕೊಂಡರು.

ಅವರು ಗುರುವಾರ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾಲ್ಪಾಡಿ ಗ್ರಾಮ ಪಂಚಾಯತ್ ನ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ತಾ.ಪಂ.ಮಾಜಿ ಸದಸ್ಯ ರುಕ್ಕಯ ಪೂಜಾರಿ ಮಾತನಾಡಿ ಅರಣ್ಯ ಇಲಾಖೆಯವರು ರಸ್ತೆಬದಿ ಗಿಡಗಳನ್ನು ನೆಟ್ಟು ಬೆಳೆದಾದ ನಂತರ ಮೆಸ್ಕಾಂ ತಂತಿಗಳಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಮೆಸ್ಕಾಂ ಇಲಾಖೆ ತೊಂದರೆಯನ್ನು ಅನುಭವಿಸಬೇಕಾಗಿದೆ ಎಂದು ಧ್ವನಿಗೂಡಿಸಿದರು.

ಮರಗಳು ತಂತಿಯ ಮೇಲೆ, ಕೆಳಗೆ ಬಿದ್ದಾಗ ಮೆಸ್ಕಾಂ ಜೊತೆಗೆ ಗ್ರಾಮಸ್ಥರು ಕೈ ಜೋಡಿಸಿದ್ದಾರೆ ಆದರೆ ಅರಣ್ಯ ಇಲಾಖೆಯವರು ಬಂದಿಲ್ಲವೆಂದು ವಿಷಾಧ ವ್ಯಕ್ತಪಡಿಸಿದ ಅವರು ಮಳೆಗಾಲದಲ್ಲಿ ವಿದ್ಯುತ್ ತಂತಿಗಳ ಮೇಲೆ ಎರಗಿ ಬೀಳುವ ಅಪಾಯವಿರುವ ಮರಗಳ ಕೊಂಬೆಗಳನ್ನು, ಮರಗಳನ್ನು ನಿವಾರಿಸುವಲ್ಲಿ  ಅರಣ್ಯ ಇಲಾಖೆಯವರ ಸ್ಪಂದಿಸದೆ ಸಮಸ್ಯೆಯಾಗಿದೆ ಎಂದರು.

ಮಳೆಯಿಂದ ಕೊಚ್ಚಿ ಹೋದ ಕಂಬಳಗುಡ್ಡೆ ಕಾಲು ಸಂಕ ರಸ್ತೆಯಿಂದಾಗಿ ಮಕ್ಕಳು ಸಹಿತ ಜನರಿಗೆ ಓಡಾಡಲು ಕಷ್ಟವಾಗುತ್ತಿದೆ ಇದನ್ನು  ದುರಸ್ತಿ ಮಾಡಿಕೊಡುವಂತೆ ಸ್ಥಳೀಯರಾದ  ಜೆಸಿಂತ, ಕರಿಯಣ್ಣ ಗೌಡ, ಹರಿಣಿ ಗೌಡ, ಸುನೀತಾ ನಝ್ರತ್, ಸುನೀತಾ ಡಿ"ಕೋಸ್ತ, ಕಮಲಗೌಡ ಮೊದಲಾದವರು ಮನವಿ ಮಾಡಿದರು. ಅಲ್ಲದೆ ದರೆಗುಡ್ಡೆ, ಜೋಗೊಟ್ಟು ಮೊದಲಾದ ಸಂಪರ್ಕ ಕಲ್ಪಿಸಲು ಕಳೆದ ಮೂರು ದಶಕಗಳಿಂದ ಮನವಿ ನೀಡುತ್ತಿದ್ದು ಇದಕ್ಕೆ ನ್ಯಾಯ ಸಿಕ್ಕಿಲ್ಲ ಆದಷ್ಟು ಬೇಗ ಇದಕ್ಕೊಂದು ಪರಿಹಾರ ಒದಗಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಕಂಬಳಗುಡ್ಡೆ ಸಂಕವನ್ನು ಮಳೆ ಬಿಟ್ಟ ತಕ್ಷಣ ತಾತ್ಕಲಿಕವಾಗಿ ದುರಸ್ತಿ ಮಾಡಿ ಕೊಡುವುದಾಗಿ ಉಪಾಧ್ಯಕ್ಷ ಗಣೇಶ್ ಬಿ.ಅಳಿಯೂರು ಭರವಸೆಯನ್ನು ನೀಡಿದರು.

ಅಲ್ಲದೆ ಸೇತುವೆಯ ಮುರಿದ ಮರದ ಕಾಲುಸಂಕಕ್ಕೆ ಪರ್ಯಾಯ ವ್ಯವಸ್ಥೆಗೆ ಜಿಲ್ಲಾ ಪಂಚಾಯತ್ ಇಂಜಿನಿಯಯರ್ ಗೆ ಸೂಚಿಸಲಾಯಿತು.

ಶಾಲಾ ಕಾಲೇಜುಗಳ ಆವರಣದಲ್ಲಿ ಧಾರ್ಮಿಕ ಸಭೆ, ಉತ್ಸವಗಳನ್ನು ನಡೆಸಲು ಅವಕಾಶವಿಲ್ಲದಿರುವ ಬಗ್ಗೆ, 2013ರ ಸುತ್ತೊಲೆಯನ್ನು ಇದೀಗ ಕಟ್ಟು ನಿಟ್ಟಾಗಿ ಪಾಲಿಸುದನ್ನು ಗ್ರಾಮ ಸಭೆಯು ಖಂಡಿಸಿತು. 

ಈ ಬಗ್ಗೆ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಮತ್ತು ಹಾಲಿ ಉಪಾಧ್ಯಕ್ಷ ಗಣೇಶ್ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಮಾತನಾಡಿ ಶಾಲೆ ಹಾಗೂ ಊರು ಸಮನ್ವಯತೆಯ ದ್ರಷ್ಠಿಯಲ್ಲಿ ಸರಕಾರ ಸುತ್ತೊಲೆಯಂತೆ ಶಾಲಾ ಮಂಡಳಿ ವರ್ತಿಸದೆ ಸ್ವಲ್ಪ ಹೊಂದಾಣಿಕೆಯಿಂದ ಶಾಲಾ ಮೈದಾನ ಆಟೋಟಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ನಿಬಂಧನೆ ಮೂಲಕ ಮೌಕಿಕವಾಗಿ ನೀಡುವ ಪ್ರಕಿಯೆ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಇಲಾಖೆಯಿಂದ ತಾವು ಅನುಮತಿ ನೀಡಲು ಸಾಧ್ಯವಿಲ್ಲ. ಶಾಲಾ ಆಡಳಿತ ಮಂಡಳಿ ಮತ್ತು  ಊರವರಿಗೆ ಬಿಟ್ಟದ್ದು ಆದರೆ ತೊಂದರೆಯಾದರೆ ನಾವು ಜವಾಬ್ದಾರರಲ್ಲ ಎಂದು ಬಿಇಓ ಕಛೇರಿಯ ಇಸಿಓ, ಸಭೆಯ ನೋಡೆಲ್ ಅಧಿಕಾರಿ ರಾಜೇಶ್ ಭಟ್ ಸ್ಪಷ್ಟಪಡಿಸಿದರು.

ಕಾಶಿಲಪಲ್ಕೆಯಲ್ಲಿ ಮೋರಿಯಾಗಿದೆ, ಜಲ್ಲಿಕಾಮಗಾರಿ ಪೂರ್ಣವಾಗದೆ ನಡೆದಾಡಲು ಸಮಸ್ಯೆಯಾಗಿದೆ ಎಂದು ಸತೀಶ್ ಸಭೆಯ ಮುಂದೆ ಮಂಡಿಸಿದರು. 

ಅಳಿಯೂರು ಶಾಲಾ ಮೈದಾನದ ಸುತ್ತಲೂ ಚರಂಡಿ ನಿರ್ಮಾಣ, ಅಕ್ಷರ ದಾಸೋಹದ ತ್ಯಾಜ್ಯ, ಸ್ಯಾನಿಟರಿ ಪ್ಯಾಡ್ ವಿಲೇವಾರಿ ಬಗ್ಗೆ ಶಿಕ್ಷಕ ಮಹಾವೀರ ಜೆ. ಪ್ರಸ್ತಾಪಿಸಿದರು. ರಸ್ತೆಗಳ ಅಗಲ ಹೆಚ್ಚಿಸಿ, ಉದ್ದ ಕಡಿಮೆಯಾದರೂ ಚಿಂತಿಲ್ಲ ಎಂದು ಜನರು ಸ. ಎಂಜಿನಿಯರ್ ಜಗದೀಪ ಜೆ. ಶೆಟೆ ಅವರಲ್ಲಿ ವಿನಂತಿಸಿದರು. 

ವಾಲ್ಪಾಡಿ ಕಜೆ ಮತ್ತು ಬೊಳಲಾಜೆ ಯಲ್ಲಿ 30  ಮುಸ್ಲಿಮ್ ಕುಟುಂಬಗಳಿಗೆ ಹಕ್ಕುಪತ್ರ ನೀಡಲು  ಬಾಕಿಯಾಗಿದೆ ಎಂದು ಹನೀಫ್ ಮತ್ತು ರಿಯಾಝ್  ಸಭೆಯ ಗಮನಕ್ಕೆ ತಂದರು. ಇಲ್ಲಿ `ಭಾಗಶ: ಡೀಮ್ಡ್ ಫಾರೆಸ್ಟ್ ಆಗಿರುವುದರಿಂದ ಸಮಸ್ಯೆಯಾಗಿದೆ ಎಂದು ಗ್ರಾಮಾಧಿಕಾರಿ ನಿಶ್ಮಿತಾ ತಿಳಿಸಿದರು. 

ಇದೀಗ ಅದನ್ನು ಸರಿಪಡಿಸಿ ಹಕ್ಕುಪತ್ರ ನೀಡಲು ಕ್ರಮವರಿಸಲಾಗುವುದು ಎಂದು ಪ್ರದೀಪ್, ಗಣೇಶ ಬಿ. ಅಳಿಯೂರು ಭರವಸೆಯಿತ್ತರು. 

ಪ್ರಾರಂಭದಲ್ಲಿ ಸರಕಾರಿ ಅಧಿಕಾರಿಗಳು ಬಾರದಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿ, ಕೆಲವರು ಬಂದ ಬಳಿಕ ಸಭೆ ಆರಂಭಿಸುವಂತಾಗಿತ್ತು. 

ಸದಸ್ಯರಾದ ಶ್ರೀಧರ ಬಂಗೇರ, ಭವಾನಿ, ಯಶೋಧ ನಾಯ್ಕ್ , ಸುಶೀಲಾ, ಕಾರ್ಯದರ್ಶಿ ಶೇಖರ್, ಸಿಬಂಧಿಗಳಾದ ಮಂಜುಶ್ರೀ, ಸೌಮ್ಯ, ಪ್ರಿಯಾ ಪಿಂಟೋ, ವಿದ್ಯಾ, ಭಾಸ್ಕರ್ ಉಪಸ್ಥಿತರಿದ್ದರು. ತೋಟಗಾರಿಕೆ ಇಲಾಖೆಯ ಯುಗೇಂದ್ರ, ತಾ. ಪಂ.ಐಎಫ್‌ಸಿ ಅನ್ವಯ, ಮಕ್ಕಳ, ಮಹಿಳಾ ಇಲಾಖೆಯ ಶುಭ, ಆರೋಗ್ಯ ಇಲಾಖೆಯ ಅನಿತಾ, ಕೃಷಿ ಇಲಾಖೆಯ ಸಂಜು ಇಲಾಖಾ ಮಾಹಿತಿ ನೀಡಿದರು.


ಪೂರ್ಣಾವಧಿಗೆ ಗ್ರಾಮಾಧಿಕಾರಿಯನ್ನು ನೀಡಿ ಗ್ರಾಮಸ್ಥರ ಆಗ್ರಹ: 

ವಾಲ್ಪಾಡಿಯಲ್ಲಿ ಪೂರ್ಣಾವಧಿಗೆ  ಗ್ರಾಮಾಧಿಕಾರಿಯಿಲ್ಲದೆ  ಸಮಸ್ಯೆಯಾಗುತ್ತಿದ್ದು. ಮಳೆಗಾಲ ಸಹಿತ ಇತರ ಕಾರ್ಯನಿರ್ವಹಣೆಗೆ ಕಷ್ಟಸಾಧ್ಯವಾಗಿರುವುದರಿಂದ ಇಲ್ಲಿಗೆ ಪೂರ್ಣಾವಧಿಗೆ ಗ್ರಾಮಾಧಿಕಾರಿಯನ್ನು ನಿಯೋಜನೆ ಮಾಡಿ ಎಂದು ಗ್ರಾಮಸ್ಥ ಅಶ್ರಫ್ ವಾಲ್ಪಾಡಿ ಆಗ್ರಹಿಸಿದರು. ಇದಕ್ಕೆ ಉಪಾಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರೂ ಧನಿಗೂಡಿಸಿದರು.















Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article