ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಲು ಒತ್ತಾಯ

ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಲು ಒತ್ತಾಯ


ಮಂಗಳೂರು: ಕರ್ನಾಟಕದಲ್ಲಿ ಬಹುಮತದಿಂದ ಚುನಾಯಿತವಾದ ಸರಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಬಿಜಿಪಿ ಸರಕಾರ ರಾಜ್ಯಪಾಲರ ಹುದ್ದೆಯನ್ನು ಬಳಸುತ್ತಿದೆ. ಬಿಜೆಪಿಯ ಈ ನಡೆಯನ್ನು ಸಿಪಿಐ ಖಂಡಿಸುತ್ತದೆ.’ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಮಂಗಳೂರು ತಾಲೂಕು ಸಮಿತಿ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ ಹೇಳಿದರು. 

ಅವರು ಭಾರತ ಕಮ್ಯುನಿಸ್ಟ್ ಪಕ್ಷದ ಮಂಗಳೂರು ತಾಲೂಕು ಸಮಿತಿ ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಮಂಗಳೂರಲ್ಲಿ ಇಂದುನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದರು.

ಯಾವುದೇ ಹರಗಣ ಅಥವಾ ಪ್ರಕರಣ ನಡೆದ ಸಂದರ್ಭದಲ್ಲಿ ತನಿಕಾ ಸಂಸ್ಥೆಗಳಿಂದ ತನಿಕೆ ನಡೆಸಿ ನ್ಯಾಯಾಂಗದ ಚೌಕಟ್ಟಿನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಸರಕಾರಗಳ ಕರ್ತವ್ಯ. ಅದನ್ನು ನಿಶ್ಪಕ್ಷಪಾತವಾಗಿ ನಡೆಸಬೇಕು ಎಂದು ಸಿಪಿಐ ಆಗ್ರಹಿಸುತ್ತದೆ. ಇತೀಚ್ಚೆಗಿನ ವರ್ಷಗಳಲ್ಲಿ, ವಿರೋಧ ಪಕ್ಷಗಳು ಸರಕಾರ ನಡೆಸುತ್ತಿರುವ ರಾಜ್ಯಗಳಲ್ಲಿನ ಸರಕಾರಗಳನ್ನು ಅಸ್ಥಿರಗೊಳಿಸಲು ಬಿಜೆಪಿ ಕೇಂದ್ರ ಸರಕಾರ ರಾಜ್ಯಪಾಲರ ಹುದ್ದೆಗಳನ್ನು ಬಳಸಿಕೊಳ್ಳುತ್ತಿದೆ. 

ಕರ್ನಾಟಕದಲ್ಲಿ ನಡೆದಿರುವ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವರು ಎಂದು ಆರೋಪಿಸಲಾದ ಬಿಜೆಪಿ ಮತ್ತು ಜನತಾ ದಳದ ಅನೇಕ ಮುಂದಾಳುಗಳ ಬಗ್ಗೆ ತನಿಕೆ ನಡೆಸಲು ರಾಜ್ಯಪಾಲರ ಅನುಮತಿಗಾಗಿ ರಾಜ್ಯಪಾಲರಿಗೆ ಬರೆದ ಅವಹಾಲುಗಳನ್ನು ವರ್ಷಗಟ್ಟಲೆ ಇಟ್ಟುಕೊಂಡು ಇದುವರೆಗೂ ಅನುಮತಿ ನೀಡಿಲ್ಲ. ಆದರೆ ಇತೀಚ್ಚೆಗೆ ಹೊರಬಿದ್ದ ಮೈಸೂರು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಕೇಸು ದಾಖಲಿಸಲು ಕೂಡಲೇ ಅನುಮತಿಯನ್ನು ರಾಜ್ಯಪಾಲರು ನೀಡಿರುವರು. ರಾಜ್ಯಪಾಲರ ಈ ಪಕ್ಷಪಾತ ನಡೆಯನ್ನು ಸಿಪಿಐ ಖಂಡಿಸುತ್ತದೆ.’ ಎಂದರು.

ನಂತರ ಪಕ್ಷದ ಜಿಲ್ಲಾ ಕಾರ್ಯದರ್ಶಿಯವರಾದ ಶೇಖರ್ ಬಿ. ಮಾತನಾಡಿ ‘ರಾಜ್ಯಪಾಲರ ಹುದ್ದೆ ಪಕ್ಷಾತೀತವಾಗಿರಬೇಕು. ಆದರೆ ಇಂದು ರಾಜ್ಯಪಾಲರುಗಳು ಬಿಜೆಪಿಯ ಪ್ರತಿನಿಧಿಯಂತೆ ವರ್ತಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಈ ಹುದ್ದೆಯನ್ನು ಕೇಂದ್ರ   ದುರುಪಯೋಗ ಮಾಡುತ್ತಿದೆ. ಆದ್ದರಿಂದ ಈ ಹುದ್ದೆಯನ್ನು ರದ್ದುಗೊಳಿಸಬೇಕೆಂದು ಸಿಪಿಐ ಒತ್ತಾಯಿಸುತ್ತದೆ.’ ಎಂದು ಹೇಳಿದರು. 

‘ದಕ್ಷಿಣ ಕನ್ನಡ ಜಿಲ್ಲಾ ಅಟೋರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟದ ಬೇಡಿಕೆಗಳನ್ನು ಜಿಲ್ಲಾಡಳಿತ ಕೂಡಲೆ ಈಡೇರಿಸಬೇಕು' ಎಂಬ ತೀರ್ಮನವನ್ನು ಸಭೆ ಅಂಗೀಕರಿಸಿತು.

ತಾಲೂಕು ಸಹಕಾರ್ಯದರ್ಶಿ ತಿಮ್ಮಪ್ಪ ಕಾವೂರು ಸ್ವಾಗತಿಸಿ ಪ್ರದರ್ಶನದ ಉದ್ಧೇಶವನ್ನು ವಿವರಿಸಿದರು. ಕೋಶಾಧಿಕಾರಿ ಸುಲೋಚನ ವಂದಿಸಿದರು. 

ಪ್ರದರ್ಶನದಲ್ಲಿ ಪಕ್ಷದ ಮುಂದಾಳುಗಳಾದ ವಿ ಕುಕ್ಯಾನ್, ಪ್ರಭಾಕರ ರಾವ್, ಆರ್ ಡಿ ಸೋನ್ಸ್, ಶಶಿಕಲ, ಶಿವಾನಂದ, ಕೃಷ್ಣಪ್ಪ ವಾಮಂಜೂರು, ಸುಧಾಕರ ಕೆ, ಜಾನಕಿ ಉರ್ವ, ಸಂಜೀವಿ ಹಳೆಯಂಗಡಿ, ಗೀತಾ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article