ಕ್ರೆಡಿಟ್ ಕಾಡ್೯ ಕ್ಯಾನ್ಸಲ್ ಮಾಡುವುದಾಗಿ ಹೇಳಿ 53 ಸಾ.ರೂ. ಟೋಪಿ
ಬಂಟ್ವಾಳ: ಅಪರಿಚಿತ ವ್ಯಕ್ತಿಯೋರ್ವ ಬ್ಯಾಂಕಿನ ಕ್ರೆಡಿಟ್ ಕಾಡ್೯ ಕ್ಯಾನ್ಸಲ್ ಮಾಡುವುದಾಗಿ ಹೇಳಿ ಬ್ಯಾಂಕ್ ಖಾತೆದಾರರ ಒಟಿಪಿ ಮತ್ತು ಸಿವಿವಿ ನಂಬರ್ ಡೆದ ಬ್ಯಾಂಕ್‌ನ ಖಾತೆದಾರರ ಖಾತೆಯಿಂದ 53,984 ರೂ. ನಗದನ್ನು ಲಪಟಾಯಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಅಗ್ರಹಾರ್ ಬೀದಿ ನಿವಾಸಿ ಕೆ. ಸುದರ್ಶನ್ ಬಲ್ಲಾಳ್ ಅವರು ಬ್ಯಾಂಕ್ ಖಾತೆಯಿಂದ ನಗದು ಹಣವನ್ನು ಕಳೆದುಕೊಂಡಿದ್ದಾರೆ.
ಇವರು ಆಕ್ಷಿಸ್‌ಬ್ಯಾಂಕ್‌ನ ಕ್ರಡಿಟ್ ಕಾಡ್೯ ಹೊಂದಿದ್ದು, ಇದನ್ನು ಕ್ಯಾನ್ಸಲ್ ಮಾಡಲೆಂದು ಕ್ರೆಡಿಟ್ ಕಾರ್ಡ್ ನಂಬರಿನ ಹಿಂಬದಿಯಲ್ಲಿದ್ದ ಟೋಲ್ ಫ್ರೀ ನಂಬರಿಗೆ ಕರೆ ಮಾಡಿದಾಗ ನೆಟ್ವರ್ಕ್ ಸಿಗುತ್ತಿಲ್ಲ ಎಂದು ಹೇಳಿದ ಬಳಿಕ ಅಪರಿಚಿತ ವ್ಯಕ್ತಿ ತನ್ನ ಮೊಬೈಲ್‌ನಿಂದ ಕರೆ ಮಾಡಿ ಕ್ರೆಡಿಟ್ ಕಾಡ್೯ ಕ್ಯಾನ್ಸಲ್ ಮಾಡಲು ಒಟಿಪಿ ಮತ್ತು ಸಿವಿವಿ ನಂಬರನ್ನು ಪಡೆದುಕೊಂಡಿದ್ದಾನೆ.
ಎರಡು ದಿನಗಳ ಬಳಿಕ ಸುದರ್ಶನ್ ಬಲ್ಲಾಳ್ ಅವರು ಕ್ರೆಡಿಟ್ ಕಾರ್ಡ್‌ನ ಸ್ಟೇಟ್ಮೆಂಟ್‌ನ್ನು ಪರಿಶೀಲಿಸಿದಾಗ ಖಾತೆಯಿಂದ 53,984 ರೂ. ಕಡಿತಗೊಂಡಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಅವರು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ.