ಲಾರಿ ಮತ್ತು ಬೈಕ್ ನಡುವೆ ಅಪಘಾತ: ಇಬ್ಬರು ಮಕ್ಕಳ ಸಹಿತ ನಾಲ್ವರು ಸಾವು
Monday, September 30, 2024
ಕಾರ್ಕಳ: ಈಚರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು, ಮಹಿಳೆ ಆಸ್ಪತ್ರೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದು, ಓರ್ವ ತೀವ್ರ ತರದಲ್ಲಿ ಗಾಯಗೊಂಡ ಘಟನೆ ಕಾರ್ಕಳದ ತಾಲೂಕಿನ ಹೊಸ್ಮಾರು ಗ್ರಾಮದ ಪಾಜಿಗುಡ್ಡೆ ಎಂಬಲ್ಲಿ ನಡೆದಿದೆ.
ಮೃತರನ್ನು ಸುರೇಶ್ ಆಚಾರ್ಯ (36), ಸಮೀಕ್ಷಾ (7), ಸುಷ್ಮಿತಾ(5), ಸುಶಾಂತ್(2) ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡವರನ್ನು ಮೀನಾಕ್ಷಿ (32) ಎಂದು ಗುರುತಿಸಲಾಗಿದೆ.
ಬೈಕ್ನಲ್ಲಿ ಒಂದೇ ಕುಟುಂಬದ ಐದು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇಬ್ಬರು ಮಕ್ಕಳು ಸೇರಿದಂತೆ ಪತಿ, ಪತ್ನಿ ಮೃತಪಟ್ಟಿದ್ದು, ಓರ್ವ ಮಗುವಿನ ಸ್ಥಿತಿ ಗಂಭೀರವಾಗಿದೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ವೇಣೂರಿನಿಂದ ಕಾರ್ಕಳ ಕಡೆಗೆ ಬರುತ್ತಿದ್ದು, ಕಾರ್ಕಳ ಬಜಗೋಳಿ ಕಡೆಯಿಂದ ಬರುತ್ತಿದ್ದ ಈಚೆರ್ ಲಾರಿ ಪಾಜೆಗುಡ್ಡೆ ತಿರುವಿನಲ್ಲಿ ಓವರ್ಟೇಕ್ ಮಾಡುವ ಭರದಲ್ಲಿ ಬೈಕೆಗೆ ಢಿಕ್ಕಿ ಹೊಡೆದಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.